Friday, September 4, 2026
spot_imgspot_img
spot_imgspot_img

ಕುಕ್ಕೆ ಸುಬ್ರಹ್ಮಣ್ಯಕ್ಕೆ ಮದುವೆಗೆ ತೆರಳುತ್ತಿದ್ದ ವಾಹನ ಪಲ್ಟಿ; ಗಂಭೀರ ಗಾಯಗೊಂಡಿದ್ದ ಓರ್ವ ಸಾವು

- Advertisement -
- Advertisement -

ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಮದುವೆಗೆಂದು ಹೊರಟ ಟೆಂಪೋ ವ್ಯಾನ್ ಪಲ್ಟಿ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಶಿವರಾಜ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಉಳಿದಂತೆ 6 ಜನರ ಪರಿಸ್ಥಿತಿ ಗಂಭೀರ ಎಂದು ತಿಳಿದುಬಂದಿದೆ.

ಸಕಲೇಶಪುರದ ವನಗೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ವ್ಯಾನ್ ಹೊರಟಿತ್ತು. ಬಿಸಿಲೆ ಘಾಟಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಮಗುಚಿ ಬಿದ್ದ ಘಟನೆ ಗುರುವಾರ ಬೆಳಿಗ್ಗೆ ನಡೆದಿತ್ತು.ವಾಹನದಲ್ಲಿ ಸುಮಾರು 30 ಮಂದಿಯಿದ್ದು, 20 ಮಂದಿ ಗಾಯಗೊಂಡಿದ್ದರು. ಇದರಲ್ಲಿ 7 ಮಂದಿಗೆ ಗಂಭೀರ ಗಾಯಗಳಾಗಿತ್ತು. ಅವರಲ್ಲಿ ಶಿವರಾಜ್ ಎಂಬವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!