Sunday, September 6, 2026
spot_imgspot_img
spot_imgspot_img

ಕಾರ್ಕಳ: ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದ ಯುವಕ ನಾಪತ್ತೆ; ಪ್ರಕರಣ ದಾಖಲು

- Advertisement -
- Advertisement -

ಕಾರ್ಕಳ: ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಯುವಕ ವಾಪಾಸು ಬಾರದೇ ನಾಪತ್ತೆಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

ನಾಪತ್ತೆಯಾದ ಯುವಕನನ್ನು ವಸಂತ ಬಿ ಎಂದು ಗುರುತಿಸಲಾಗಿದೆ.

ವಸಂತ್ ಅಕ್ಟೋಬರ್ 29ರಂದು ಮದುವೆಯಾಗಿದ್ದರು. ನ.6ರಂದು ಮದುವೆಯಾದ ಯುವತಿ ಗಂಡನ ಜೊತೆ ತನ್ನ ತಾಯಿ ಮನೆಗೆ ಆಗಮಿಸಿದ್ದಳು. ಬಳಿಕ ನ.7ರಂದು ನಾರವಿ ಕಟೀಲು ದೇವಸ್ಥಾನಗಳಿಗೆ ಹೋಗಿ ಬಂದಿದ್ದಾರೆ. ಅದೇ ದಿನ ಸಂಜೆ 4 ಗಂಟೆಗೆ ಹೊಸ್ಮಾರು ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸು ಬಾರದೇ ಕಾಣೆಯಾಗಿದ್ದಾರೆ. ಅವರ ಮೊಬೈಲ್ ಫೋನ್ ಸ್ವಿಚ್‌ ಆಫ್ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ನಾಪತ್ತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!