ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ





ವಿಟ್ಲ: ಹಿಂದೂ ಯುವ ಸೇನೆ ವಿಟ್ಲ ಇದರ ರಜತ ಮಹೋತ್ಸವದ ಪ್ರಯುಕ್ತ ಇಂದು (09/11/2025) ಶ್ರೀ ಪಂಚಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಅನೇಕ ಭಕ್ತಾಧಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ನಂತರ ವಿಟ್ಲದ ಉದ್ಯಮಿ ಸುಬ್ರಾಯ ಪೈ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸದಾಶಿವ ವಿ ಆರ್ ವಿಟ್ಲ ಅರಮನೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಯಶ್ಪಾಲ್ ಸುವರ್ಣ ಶಾಸಕರು ಉಡುಪಿ ವಿಧಾನ ಸಭಾ ಕ್ಷೇತ್ರ ಹಾಗೂ ಮಾಜಿ ಅಧ್ಯಕ್ಷರು ಯುವ ಸೇನೆ ಉಡುಪಿ ಜಿಲ್ಲೆ, ಅರುಣ್ ಕುಮಾರ್ ಪುತ್ತಿಲ, ಸಂಚಾಲಕರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಕೃಷ್ಣಯ್ಯ ಕೆ ವಿಟ್ಲ ಅರಮನೆ, ದಿವಾಕರ್ ದಾಸ್ ನೇರ್ಲಾಜೆ, ಆಡಳಿತ ನಿರ್ದೇಶಕರು ಎಸ್.ಎಲ್.ವಿ ಬುಕ್ಸ್ ಇಂಡಿಯಾ ಪ್ರೈ.ಲಿ ಮೈಸೂರು, ಕಿಶೋರ್ ಕುಮಾರ್ ಪುತ್ತೂರು, ಸದಸ್ಯರು ವಿಧಾನ ಪರಿಷತ್ ಹಾಗೂ ಪ್ರಧಾನ ಕಾರ್ಯದರ್ಶಿ ಬಿಜೆಪಿ ದ. ಕ, ಕರುಣಾಕರ ಗೌಡ ನಾಯ್ತೊಟ್ಟು, ಅಧ್ಯಕ್ಷರು ಪಟ್ಟಣ ಪಂಚಾಯತ್ ವಿಟ್ಲ, ಯಶೋಧರ ಚೌಟ ಅಧ್ಯಕ್ಷರು, ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಮಂಗಳೂರು, ವೀರಪ್ಪ ಮೂಡುಶೆಡ್ಡೆ, ಹಿಂದೂ ಯುವ ಸೇನೆ ವಿಟ್ಲ ಹರೀಶ್ ಕೆ,ವಿಟ್ಲ ಹಿಂದೂ ಯುವ ಸೇನೆ ಅಧ್ಯಕ್ಷ ರಘುಪತಿ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಖ್ಯಾತ ಯುವ ವಾಗ್ಮಿ, ಲೇಖಕರು ಕುಮಾರಿ ಹಾರಿಕ ಮಂಜುನಾಥ್ ಬೆಂಗಳೂರು ಇವರು ಧಾರ್ಮಿಕ ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಹಿಂದೂ ಯುವ ಸೇನೆ ವಿಟ್ಲ ಇದರ ಎಲ್ಲಾ ಪದಾಧಿಕಾರಿಗಳು ಸೇರಿದಂತೆ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಟ್ಲ ಹಿಂದೂ ಯುವ ಸೇನೆ ಅಧ್ಯಕ್ಷ ರಘುಪತಿ ಪೈ ಸ್ವಾಗತಿಸಿದರು. ರಶ್ಮಿ ಹರೀಶ್ ವರದಿ ವಾಚಿಸಿದರು. ಕಾರ್ಯದರ್ಶಿ ಉಮೇಶ್ ಕುಲಾಲ್ ಧನ್ಯವಾದವಿತ್ತರು. ಹರೀಶ್ ಕೆ ಕಾರ್ಯಕ್ರಮ ನಿರೂಪಿಸಿದರು.









