Thursday, July 23, 2026
spot_imgspot_img
spot_imgspot_img

ಭಟ್ಕಳ: ಮೀನುಗಾರಿಕೆ ವೇಳೆ ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ಮೃತ್ಯು

- Advertisement -
- Advertisement -

ಭಟ್ಕಳ: ಮೀನುಗಾರನೋರ್ವ ಮೀನುಗಾರಿಗೆ ಸಂದರ್ಭದಲ್ಲಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಭಟ್ಕಳದ ಮಾವಿನಕುರ್ವೆ ಬಂದರ್ ಬಳಿ ನಡೆದಿದೆ.

ಮೃತರನ್ನು ಶ್ರೀಧರ್ ಪರಮೇಶ್ವರ್ ಖಾರ್ವಿ ಎಂದು ಗುರುತಿಸಲಾಗಿದೆ.

ಶ್ರೀಧರ್ ಅವರು ಮಾವಿನಕುರ್ವೆ ಬಂದರ್‌ನಿಂದ ಸುಮಾರು 15 ಕಿಲೋಮೀಟರ್ ದೂರದ ಸಮುದ್ರದೊಳಗೆ ಮೀನುಗಾರಿಕೆಗೆ ತೆರಳಿದ್ದರು. ಬಲೆ ಎಳೆಯುವ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದ ಅವರು ತೀವ್ರ ಗಾಯಗೊಂಡು ಪ್ರಾಣ ಕಳೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಸಹ ಮೀನುಗಾರರು ಅವರನ್ನು ತಕ್ಷಣವೇ ತೀರಕ್ಕೆ ಕರೆತಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!