Wednesday, July 29, 2026
spot_imgspot_img
spot_imgspot_img

ಇಡ್ಕಿದು ನಿವಾಸಿ ಹರೀಶ್ ಆತ್ಮಹತ್ಯೆ; ಮಾನಸಿಕ ಕಿರುಕುಳ ಮತ್ತು ಜೀವ ಬೆದರಿಕೆ ಆರೋಪ

- Advertisement -
- Advertisement -

ಆರೋಪಿ ಹೇಮಂತ್ ಆಚಾರ್ಯ ತಲ್ವಾರು ಹಿಡಿದು ಜೀವ ಬೆದರಿಕೆ- ಮೃತರ ಮಗಳಿಂದ ಠಾಣೆಗೆ ದೂರು

ಇಡ್ಕಿದು: ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆಯಿಂದ ಮನನೊಂದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಡ್ಕಿದು ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಂಟ್ವಾಳ ಇಡ್ಕಿದು ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ.

ಇಡ್ಕಿದು ನಿವಾಸಿ ಹರೀಶ್‌ರವರು ಪುತ್ತೂರಿನ ಕಾಂಪ್ಲೆಕ್ಸ್ ಒಂದರಲ್ಲಿ ವಾಹನಗಳ ಪೈಂಟಿಂಗ್ ಕೆಲಸ‌ ಮಾಡಿಕೊಂಡಿದ್ದು, ಅದೇ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ಹೇಮಂತ್ ಆಚಾರ್ಯ ಎಂಬವರು ಹರೀಶ್‌‌ರವರಿಗೆ ಸುಮಾರು ಒಂದು ತಿಂಗಳಿನಿಂದ ವಿನಾಃ ಕಾರಣ ಬೈಯ್ಯುವುದು ಮಾನಸಿಕ ಕಿರುಕುಳ ನೀಡುತ್ತಿದ್ದು, ಕಳೆದ ಕೆಲ ದಿನಗಳ ಹಿಂದೆ ಹರೀಶ್‌‌ರವರಿಗೆ ಆರೋಪಿಯು ಹಲ್ಲೆ ಮಾಡಿ, ತಲ್ವಾರು ಹಿಡಿದು ಜೀವ ಬೆದರಿಕೆ ಹಾಕಿರುತ್ತಾರೆ.

ಈ ವಿಷಯ ಹರೀಶ್‌‌ರವರು ಅವರ ಮಗಳಿಗೆ ತಿಳಿಸಿದ್ದು, ಆರೋಪಿಯ ಕಿರುಕುಳ ಹಾಗೂ ಹಲ್ಲೆಯಿಂದ ಹರೀಶ್‌ರವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಮೃತ ಹರೀಶ್‌ರವರ ಮಗಳು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ : 112/2025 ಕಲಂ-108 BNS ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

ಹರೀಶ್‌ರವರ ಅಸ್ವಾಭಾವಿಕ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಾಗಿದ್ದು, ಮುಂದುವರಿದಂತೆ, ಮೃತರ ಮಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣವನ್ನು ಪುತ್ತೂರು ನಗರ ಠಾಣೆಗೆ ಮುಂದಿನ ತನಿಖೆಗಾಗಿ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!