Friday, September 4, 2026
spot_imgspot_img
spot_imgspot_img

ಸುಳ್ಯ: ಜಾಗದ ತಕರಾರಿನ ಹಿನ್ನೆಲೆಯಲ್ಲಿ ಕತ್ತಿಯಿಂದ ಹಲ್ಲೆ

- Advertisement -
- Advertisement -

ಸುಳ್ಯ : ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಸುಳ್ಯದ ಕೊಲ್ಲಮೊಗ್ರದ ಶಿವಾಲದಲ್ಲಿ ನಡೆದಿದೆ. ಭರತ್ ಶಿವಾಲ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಕೊಲ್ಲಮೊಗ್ರ ಗ್ರಾಮದ ಶಿವಾಲ ವಿಶ್ವನಾಥ ರೈ ಹಲ್ಲೆಗೊಳಗಾದವರಾಗಿದ್ದಾರೆ.

ವಿಶ್ವನಾಥ ರೈ ಮತ್ತು ಭರತ್ ಶಿವಾಲ ನಡುವೆ ಹಲವು ಸಮಯಗಳಿಂದ ಜಾಗದ ತಕರಾರು ನಡೆಯುತ್ತಿತ್ತು. ಈ ನಡುವೆ ಭರತ್ ಶಿವಾಲ ರಸ್ತೆಯನ್ನು ಅಗಲೀಕರಣಗೊಳಿಸಿದ್ದು, ಇದೇ ಸಂದರ್ಭದಲ್ಲಿ ವಿಶ್ವನಾಥ ರೈ ತನ್ನ ಜಾಗಕ್ಕೆ ಬೇಲಿ ಹಾಕಿದ್ದಾರೆ.ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮತ್ತೆ ವಿವಾದ ಉಂಟಾಗಿದೆ ಉಂಟಾಗಿದೆ ಎಂದು ತಿಳಿದು ಬಂದಿದೆ. ಬೇಲಿ ತೆಗೆಯುವ ವಿಚಾರದಲ್ಲಿ ಜಗಳವಾಗಿ ವಿಶ್ವನಾಥ ರೈ ಅವರಿಗೆ ಭರತ್ ಶಿವಾಲ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾನೆ.

ಗಾಯಗೊಂಡ ವಿಶ್ವನಾಥ ರೈ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!