




ವಿಟ್ಲ: ಪಿಎಂಶ್ರೀ ಸರಕಾರಿ ಪ್ರೌಢಶಾಲೆ (RMSA) ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದ ವಾರ್ಷಿಕೋತ್ಸವ ನಡೆಯಿತು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ರವಿಪ್ರಕಾಶ್, ಪುಣೆ DEUTZ ಎಂಜಿನ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಾಲೆಯ ಹಿರಿಯ ವಿದ್ಯಾರ್ಥಿ ವೇದಜ್ಞ ವಿಟ್ಲ, ಮೈಸೂರು SLV ಬುಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಾಲಕ ದಿವಾಕರ್ ದಾಸ್ ನೇರ್ಲಾಜೆ, ಪುತ್ತೂರು ಜೋಸ್ ಅಲುಕಾಸ್ ಪ್ರೈವೇಟ್ ಲಿಮಿಟೆಡ್ ಇದರ ಮ್ಯಾನೇಜರ್ ಹರಿ ಮರಾರ್, ಶ್ರೀ ಬಾರತೀ ಜನಾರ್ದನ ಸೇವಾ ಟ್ರಸ್ಟ್ ವಿಟ್ಲ ಕಾರ್ಯದರ್ಶಿ ಸುಬ್ರಾಯ ಪೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಾಥ ವಿಟ್ಲ, ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷೆ ರಶ್ಮಿ ಹರೀಶ್ ಭಾಗವಹಿಸಿದ್ದರು.


ಪಟ್ಟಣ ಪಂಚಾಯತ್ ಸದಸ್ಯರುಗಳಾದ ಕೃಷ್ಣ ಮತ್ತು ಸುನಿತಾ ಕೋಟ್ಯಾನ್, ವಿದ್ಯಾರ್ಥಿ ನಾಯಕ ಮನೀಶ್ ಕಾರ್ಯದರ್ಶಿ ವೈನವಿ ಜೆ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ವರದಿ ವಾಚಿಸಿ ವಂದಿಸಿದರು. ಶೋಬಾ ಕುಂದರ್ ನಿರೂಪಿಸಿದರು. ವಾರಿಜ, ಅರುಣಾ, ದಯಾನಂದ ಮತ್ತು ಶ್ವೇತಾ ಸಹಕರಿಸಿದರು.








