Wednesday, September 30, 2026
spot_imgspot_img
spot_imgspot_img

ಮೀನು ಹಿಡಿಯಲು ಹೋದ ವ್ಯಕ್ತಿ ಅನುಮಾನಸ್ಪದವಾಗಿ ನಾಪತ್ತೆ ಪ್ರಕರಣ- ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಉಜಿರೆ ಶಿವಾಜಿ ನಗರ ನಿವಾಸಿ ರಮೇಶ್ ಗೌಡ ಎಂಬವರು ದಿನಾಂಕ 07.12.2020 ರಿಂದ ಕಾಣೆಯಾಗಿದ್ದಾರೆ.

ಅವರ ಪತ್ನಿಯು ನೀಡಿದ ದೂರಿನ ಅನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ನಡೆಸಿ ರಮೇಶ್ ಗೌಡರವರು ಬೆಳ್ತಂಗಡಿ ಉಜಿರೆ ಗ್ರಾಮದ ನಿವಾಸಿ ಆರೋಪಿ ಸುಂದರ ಶೆಟ್ಟಿ (61) ಎಂಬವರೊಂದಿಗೆ ದಿನಾಂಕ 07-12-2020 ರಂದು ಜೊತೆಯಲ್ಲಿ ಮೀನು ಹಿಡಿಯಲು ಹೋದಾಗ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಸೋಮವತಿ ನದಿಯಲ್ಲಿ ರಮೇಶ್ ಗೌಡರು ಮುಳುಗಡೆಯಾದರು.

ಈ ಬಗ್ಗೆ ಆರೋಪಿ ಸುಂದರ ಶೆಟ್ಟಿಯವರಿಗೆ ತಿಳಿದಿದ್ದರೂ ಕೂಡಾ ಈ ವಿಚಾರವನ್ನು ಉದ್ದೇಶಪೂರ್ವಕವಾಗಿ ಪೊಲೀಸ್ ಠಾಣೆಗಾಗಲೀ, ರಮೇಶ್ ಗೌಡ ರವರ ಮನೆಯವರಿಗಾಗಲೀ, ಮಾಹಿತಿಯನ್ನು ನೀಡದಿರುವುದಲ್ಲದೇ ರಮೇಶ್ ಗೌಡ ರವರು ಕಾಣೆಯಾದ ಬಗ್ಗೆ ದಾಖಲಾದ ಪ್ರಕರಣದಲ್ಲಿ ವಿಚಾರಣೆಗೊಳಪಡಿಸಿದ ಸಮಯ ಕೂಡಾ ಮಾಹಿತಿಯನ್ನು ನೀಡದಿರುವುದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿರುತ್ತದೆ. ಆದ್ದರಿಂದ ಆರೋಪಿ ಸುಂದರ ಶೆಟ್ಟಿಯ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 202 IPC ಯಂತೆ‌ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!