Wednesday, July 22, 2026
spot_imgspot_img
spot_imgspot_img

ವಿಮಾನಯಾನ ಇತಿಹಾಸದಲ್ಲೆ ಬೃಹತ್ ಸಂಚಾರ ವ್ಯತ್ಯಯ -(ಡಿ.6)ಇಂದು ಸಾವಿರಕ್ಕೂ ಅಧಿಕ ಇಂಡಿಗೋ ವಿಮಾನಯಾನ ರದ್ದು ಸಾಧ್ಯತೆ

- Advertisement -
- Advertisement -

ಹೊಸದಿಲ್ಲಿ: ಇಂಡಿಗೋ ವಿಮಾನಗಳ ಬೃಹತ್ ಸಂಚಾರ ವ್ಯತ್ಯಯ ಶುಕ್ರವಾರ ತಾರಕಕ್ಕೇರಿದ್ದು, ಈ ದಿನ 1,000ಕ್ಕೂ ಅಧಿಕ ಯಾನಗಳನ್ನು ರದ್ದುಪಡಿಸಲಾಗಿದೆ. ಇದು ವಿಮಾನಯಾನ ಇತಿಹಾಸದಲ್ಲೇ ಒಂದು ದಿನದಲ್ಲಿ ರದ್ದಾದ ಅತ್ಯಧಿಕ ಸಂಖ್ಯೆಯ ವಿಮಾನಯಾನವಾಗಿದೆ.

ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯು ಶುಕ್ರವಾರ ತನ್ನ ದೈನಂದಿನ ಯಾನಗಳ ಪೈಕಿ ಅರ್ಧಕ್ಕೂ ಹೆಚ್ಚಿನ ಯಾನಗಳನ್ನು ಶುಕ್ರವಾರ ರದ್ದುಪಡಿಸಿದ್ದು, ಸಂಜೆ ಪ್ರಕಟಣೆಯೊಂದನ್ನು ಹೊರಡಿಸಿದ ಇಂಡಿಗೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್ ಎಲ್ಡರ್ಸ್‌, ಈ ಅವ್ಯವಸ್ಥೆಗಾಗಿ ಪ್ರಯಾಣಿಕರ ಕ್ಷಮೆ ಕೋರಿದ್ದಾರೆ. ವಿಮಾನಯಾನಗಳ ವ್ಯತ್ಯಯವು ಶನಿವಾರವೂ(ಇಂದು) ಕೂಡ ಮುಂದುವರಿಯಲಿದೆ ಹಾಗೂ ಯಾನಗಳು ರದ್ದಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

“ಡಿಸೆಂಬರ್ 10 ಮತ್ತು 15ರ ನಡುವೆ ಪರಿಸ್ಥಿತಿಯು ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಆದರೂ, ಯಾನಗಳ ಬೃಹತ್ ಸಂಖ್ಯೆಯ ಹಿನ್ನೆಲೆಯಲ್ಲಿ ಈ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ’ ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.

ಇಂಡಿಗೋ ಪ್ರತಿದಿನ ಸುಮಾರು 2,300 ದೇಶಿ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಏರ್ಪಡಿಸುತ್ತದೆ. ವಿವಿಧ ಕಾರಣಗಳಿಂದಾಗಿ ವಿಮಾನ ಯಾನಗಳ ವಿಳಂಬ ಮತ್ತು ರದ್ದತಿ ಸಂಭವಿಸಿದೆ ಎಂದು ಪೀಟರ್ ಎಲ್ಟರ್ಸ್‌ ಹೇಳಿದ್ದಾರೆ.

- Advertisement -

Related news

error: Content is protected !!