Monday, November 9, 2026
spot_imgspot_img
spot_imgspot_img

ಇಂಡಿಗೋ ವಿಮಾನ ರದ್ದತಿ-ಉನ್ನತ ಮಟ್ಟದ ತನಿಖೆಗೆ ಕೇಂದ್ರ ಆದೇಶ

- Advertisement -
- Advertisement -

ಹೊಸದಿಲ್ಲಿ: ಇಂಡಿಗೋ ವಿಮಾನಯಾನಗಳ ಬೃಹತ್ ಸಂಖ್ಯೆಯ ರದ್ದತಿ ಮತ್ತು ವಿಳಂಬದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗುವುದು ಮತ್ತು ಉತ್ತರದಾಯಿತ್ವವನ್ನು ನಿಗದಿಪಡಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಶುಕ್ರವಾರ ಪ್ರಕಟಣೆಯೊಂದರಲ್ಲಿ ಘೋಷಿಸಿದ್ದಾರೆ.

ಈ ಪ್ರಕಟನೆ ಹೊರಬಿದ್ದ ನಿಮಿಷಗಳಲ್ಲೇ, ವಿಮಾನಯಾನಗಳ ವಿಳಂಬ ಮತ್ತು ರದ್ದತಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸಲು ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಘೋಷಿಸಿದೆ.

ಇಂಡಿಗೋ ವಿಮಾನಯಾನಗಳ ಭಾರೀ ಪ್ರಮಾಣದ ವಿಳಂಬ ಮತ್ತು ರದ್ದತಿಯ ಹಿನ್ನೆಲೆಯಲ್ಲಿ ಇಂಡಿಗೋ ಸಂಸ್ಥೆಯ ಪೈಲಟ್‌ಗಳು, ವಿಮಾನದ ಒಳಗಿನ ಸಿಬ್ಬಂದಿ ಮತ್ತು ಹೊರಗಿನ ಸಿಬ್ಬಂದಿ ಬರೆದಿರುವರೆನ್ನಲಾದ “ಬಹಿರಂಗ ಪತ್ರ”ವೊಂದು ವೈರಲ್ ಆಗಿದೆ.

ಪ್ರಸಕ್ತ ಅವ್ಯವಸ್ಥೆಯು ಕೇವಲ ಕಾರ್ಯನಿರ್ವಹಣೆ ವೈಫಲ್ಯವಲ್ಲ, ಅದು ಯೋಜನೆ ಮತ್ತು ಪ್ರಾಥಮಿಕ ಸುರಕ್ಷತೆಯ ವೈಫಲ್ಯವಾಗಿದೆ ಎಂದು ಪತ್ರ ಹೇಳುತ್ತದೆ.

ಪ್ರಯಾಣಿಕರ ಆಕ್ರೋಶ, ನಿಂದನೆ ಮತ್ತು ದೂಷಣೆಗಳನ್ನು ಎದುರಿಸಿದ್ದು ಇಂಡಿಗೋದ ಉದ್ಯೋಗಿಗಳು, ಆದರೆ, ವ್ಯವಸ್ಥೆ ಕುಸಿಯಲು ಕಾರಣವಾದ ಆಯಕಟ್ಟಿನ ನಿರ್ಧಾರಗಳನ್ನು ತೆಗೆದುಕೊಂಡವರು ಇದರ ಪರಿಣಾಮಗಳಿಂದ ದೂರವಿದ್ದಾರೆ ಎಂದು ಪತ್ರ ಆರೋಪಿಸಿದೆ.

- Advertisement -

Related news

error: Content is protected !!