10ನೇ ವರ್ಷದ ಗೋಪೂಜೆ ಸಾರ್ವಜನಿಕ ಶ್ರೀ ಲಕ್ಷ್ಮೀ ಕಲ್ಪೋಕ್ತ ಪೂಜೆ ಹಾಗೂ ಹಿಂದೂ ಹೃದಯ ಸಂಗಮ





ಪೆರುವಾಯಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಸಮಿತಿ ಪೆರುವಾಯಿ ಇದರ ಜಂಟಿ ಆಶ್ರಯದಲ್ಲಿ 10ನೇ ವರ್ಷದ ಗೋಪೂಜೆ ಸಾರ್ವಜನಿಕ ಶ್ರೀ ಲಕ್ಷ್ಮೀ ಕಲ್ಪೋಕ್ತ ಪೂಜೆ ಹಾಗೂ ಹಿಂದೂ ಹೃದಯ ಸಂಗಮ ಕಾರ್ಯಕ್ರಮವು 20-12-2025ನೇ ಶನಿವಾರ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಪೂರ್ವಾಹ್ನ 8.00ಕ್ಕೆ ಗಣಪತಿ ಹವನ ನಡೆಯಲಿದೆ. ಸಂಜೆ 4:00ರಿಂದ ವೇದಮೂರ್ತಿ ಶ್ರೀ ಹರ್ಷಭಟ್ ಕಡೆಂಗೋಡ್ಲು ಇವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಲಕ್ಷ್ಮೀ ಕಲ್ಪೋಕ್ತ ಪೂಜೆ ಪ್ರಾರಂಭ ಸಂಜೆ 5:00ರಿಂದ ವಿವಿಧ ಕುಣಿತಾ ಭಜನಾ ತಂಡಗಳೊಂದಿಗೆ “ಗೋಮಾತಾ ಶೋಭಾಯಾತ್ರೆ” ನಡೆಯಲಿದೆ. ಸಂಜೆ 6:00ರಿಂದ ಗೋಪೂಜೆ, ಶ್ರೀ ಲಕ್ಷ್ಮೀ ಕಲ್ಲೋಕ್ತ ಪೂಜೆಯ ಮಹಾಮಂಗಳಾರತಿ ನಡೆದು ಸಂಜೆ 6:30ರಿಂದ ಧಾರ್ಮಿಕ ಸಭೆ, ತದನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನ ಶ್ರೀ ಕ್ಷೇತ್ರ ಒಡಿಯೂರು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಜನ ನೀಡಲಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಜಯ್ ಸಾಮ್ರಾಟ್ ಪುತ್ತೂರು ಸ್ಥಾಪಕಾಧ್ಯಕ್ಷ ಸಹಜ್ ರೈ ಬಳ್ಳಜ್ಜ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಯುವ ವಾಗಿ, ಲೇಖಕರು ಬೆಂಗಳೂರು ಕುಮಾರಿ ಹಾರಿಕ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ಗ್ರಾಮಾಂತರ ಮಂಡಲ ಭಾ.ಜ.ಪ ಅಧ್ಯಕ್ಷ ದಯಾನಂದ ಶೆಟ್ಟಿ ಉಜರೆಮಾರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ಸಂಯೋಜಕ ರಸಿಂಹ ಮಾಣಿ ವಿಶೇಷ ಅಭ್ಯಾಗತರಾಗಿ ಉಪಸ್ಥಿತರಿರುವರು. ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಅಧ್ಯಕ್ಷ ಮನೋರಾಜ್ ರೈ ಅಡಿವಾಯಿ, ಹಿಂದೂ ಹೃದಯ ಸಂಗಮ ಸಮಿತಿ ಪೆರುವಾಯಿ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ ಕಲ್ಲಡ್ಕ ಗೌರವ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಖ್ಯಾತ ಚರ್ಮರೋಗ ತಜ್ಞ ಡಾ. ಸುಬಾದ್ ಕುಮಾರ್ ರೈ ಮುಕ್ಡಾಪು ಇವರನ್ನು ಸನ್ಮಾನಿಸಲಾಗುವುದು. ದೈವದ ಚಾಕರಿ ವರ್ಗ ಶಿವಪ್ಪ ಮೂಲ್ಯ ಅಳಿಕೆ, ದೈವ ಚಾಕರಿ ವರ್ಗ ಕೃಷ್ಣ ಮಡಿವಾಳ ಮುಳ್ಳಗುಡ್ಡೆ, ಹಿರಿಯ ದೈವ ನರ್ತಕ ದೆಯ್ಯು ನಲಿಕೆ, ಹಿರಿಯ ದೈವ ನರ್ತಕ ಆನಂದ ನಲಿಕೆ ಇವರನ್ನು ಗೌರವಿಸಲಾಗುವುದು.
ಬಳಿಕ ಕಲಾ ಸಂಗಮ ಮಂಗಳೂರು ನಾಟಕ ತಂಡದಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ “ಛತ್ರಪತಿ ಶಿವಾಜಿ” ಚಾರಿತ್ರಿಕ ನಾಟಕ ನಡೆಯಲಿದೆ.








