Wednesday, July 22, 2026
spot_imgspot_img
spot_imgspot_img

ಪುತ್ತೂರು: ಹೃದಯಾಘಾತದಿಂದ ವ್ಯಕ್ತಿ ಸಾವು

- Advertisement -
- Advertisement -

ಪುತ್ತೂರು: ಹೃದಯಾಘಾತದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಬನ್ನೂರು ಮೇಲ್ಮಜಲು ಮೂಲದ ಸಿವಿಲ್ ಇಂಜಿನಿಯರ್ ಅರುಣ್ ಆಚಾರ್ಯ (51)ಎಂದು ಗುರುತಿಸಲಾಗಿದೆ.

ಬನ್ನೂರು ಮೇಲ್ಮಜಲು ನಿವಾಸಿ ಕಂದಾಯ ಇಲಾಖೆಯ ನಿವೃತ್ತ ಖಜಾನಾಧಿಕಾರಿ ವಿಠಲ ಆಚಾರ್ಯ ಅವರ ಪುತ್ರ ಮುಂಡೂರು ಶೆಟ್ಟಿಮಜಲು ನಿವಾಸಿ ಅರುಣ್ ಅವರು ಸಿವಿಲ್ ಇಂಜಿನಿಯರ್ ಆಗಿದ್ದರು.ಡಿ.19ರಂದು ಪುತ್ತೂರು ಬೈಪಾಸ್‌ ರಸ್ತೆಯಲ್ಲಿನ ಹೊಟೇಲ್‌ವೊಂದರಲ್ಲಿ ಉಪಹಾರ ಸೇವಿಸಿ ಕೈ ತೊಳೆದು ಹೊರಗೆ ಬರುತ್ತಿದ್ದಂತೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಫಲಕಾರಿಯಾಗಲಿಲ್ಲ.

ಮೃತರು ತಂದೆ ವಿಠಲ ಆಚಾರ್ಯ, ಪತ್ನಿ, ಪುತ್ರ ಹಾಗು ಸಹೋದರರಾದ ಶಿಕ್ಷಕ ಕಿಶನ್ ಆಚಾರ್ಯ, ಎಸ್‌ಜಿ ಸೊಸೈಟಿಯಲ್ಲಿ ಮ್ಯಾನೇಜರ್ ಕಿರಣ್ ಅವರನ್ನು ಅಗಲಿದ್ದಾರೆ.

- Advertisement -

Related news

error: Content is protected !!