Tuesday, July 28, 2026
spot_imgspot_img
spot_imgspot_img

ಕನ್ಯಾಡಿ: ಅಕ್ರಮ ಇಸ್ಪಿಟ್‌ ಅಡ್ಡೆಗೆ ಪೊಲೀಸ್‌ ದಾಳಿ; ಸೊತ್ತುಗಳು ಸಹಿತ 13 ಮಂದಿ ವಶಕ್ಕೆ

- Advertisement -
- Advertisement -

ಕನ್ಯಾಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ-2 ಎಂಬಲ್ಲಿರುವ ಅರ್ಕ ಕನ್ವೆನ್ಸನ್‌ ಹಾಲ್‌ನಲ್ಲಿ ಅಕ್ರಮವಾಗಿ ಅಂದರ್‌ ಬಾಹರ್‌ ಎಂಬ ಇಸ್ಪಿಟ್‌ ಆಟವಾಡುತ್ತಿದ್ದ ಸ್ಥಳಕ್ಕೆ ಬೆಳ್ತಂಗಡಿ ಗ್ರಾಮಾಂತರ ವೃತ್ತನಿರೀಕ್ಷಕರ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿದ್ದು 13 ಮಂದಿಯನ್ನು ವಶಕ್ಕೆ ಪಡೆದ ಘಟನೆ ಧರ್ಮಸ್ಥಳ ಗ್ರಾಮದ ಕನ್ಯಾಡಿ-2 ಎಂಬಲ್ಲಿ ನಡೆದಿದೆ.

ಆರೋಪಿಗಳನ್ನು ರಾಧಕೃಷ್ಣ(38), ವಚನ್‌ ಅಜಿಕುರಿ, ಅವಿನಾಶ್‌ ಶೆಟ್ಟಿ, ನಿಧೀಶ್‌ (30), ಅನ್ವರ್‌ (43), ಮಹಮ್ಮದ್‌ ಶಫಿಕ್‌ (38), ಇಬ್ರಾಹೀಂ (40), ಪರಮೇಶ್‌ (57), ಶರೀಫ್‌ (38), ಉಬೈದುಲ್ಲಾ(43), ಪರಮೇಶ್ವರಪ್ಪ (56), ಅಶೋಕ್‌ (48), ಗಾಡ್ವಿನ್‌ ಗೋವಿಯಸ್‌ (60) ಎಂದು ಗುರುತಿಸಲಾಗಿದೆ.

ಡಿ.22ರಂದು ರಾತ್ರಿ ಧರ್ಮಸ್ಥಳ ಗ್ರಾಮದ ಕನ್ಯಾಡಿ-2 ಎಂಬಲ್ಲಿ, ಅವಿನಾಶ್‌ ಶೆಟ್ಟಿ ಎಂಬವರಿಗೆ ಸೇರಿದ ಅರ್ಕ ಕನ್ವೆನ್ಸನ್‌ ಹಾಲ್‌ನಲ್ಲಿ, ಹಲವು ಜನರು ಸೇರಿಕೊಂಡು ಜೋರಾಗಿ ಬೊಬ್ಬೆ ಹೊಡೆದು ಅಸುಪಾಸಿನವರಿಗೆ ತೊಂದರೆ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಗ್ರಾಮಾಂತರ ವೃತ್ತನಿರೀಕ್ಷಕ ರವಿ.ಬಿ ಎಸ್‌ ರವರಿಗೆ ಮಾಹಿತಿ ಬಂದ‌ ಮೇರೆಗೆ ಧರ್ಮಸ್ಥಳ ಠಾಣಾ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿದರು. ಈ ವೇಳೆ ಹಾಲ್‌ನ ಮೊದಲನೇ ಮಹಡಿಯಲ್ಲಿರುವ ಪಾರ್ಟಿಹಾಲ್‌‌‌ನಲ್ಲಿ ಹಲವು ಜನರು ಸಂಘಟಿತರಾಗಿ ಅಕ್ರಮವಾಗಿ ಹಣಗಳಿಸುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಅಂದರ್‌ ಬಾಹರ್‌ ಎಂಬ ಇಸ್ಪಿಟ್‌ ಆಟ ಆಡುತ್ತಿರುವುದು ಕಂಡುಬಂದಿರುತ್ತದೆ.

ಮುಂದಿನ ಕಾನೂನು ಕ್ರಮಕ್ಕಾಗಿ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ 13 ಮಂದಿಯನ್ನು ಹಾಗೂ ಇತರರನ್ನು ವಶಕ್ಕೆ ಪಡೆದು, ಕಾನೂನು ಬಾಹಿರ ಕೃತ್ಯಕ್ಕೆ ಬಳಸುತ್ತಿದ್ದ ಇಸ್ಪಿಟ್‌ ಎಲೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಅ.ಕ್ರ:81/2025 ಕಲಂ: 79, 80 KP Act &ಕಲಂ: 112 BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!