Tuesday, July 21, 2026
spot_imgspot_img
spot_imgspot_img

ಬಂಟ್ವಾಳ : ಪಾವತಿಯಾಗದ ಪುರಸಭೆ ವೇತನ- ಪುರಸಭಾ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ

- Advertisement -
- Advertisement -

ಬಂಟ್ವಾಳ: ಪುರಸಭೆಯಲ್ಲಿ ಕನಿಷ್ಠ ವೇತನದಡಿ ಮತ್ತು ಹೊರಗುತ್ತಿಗೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ ಪಾವತಿಸಿಲ್ಲ ಎಂಬ ಆರೋಪದ ಕಾರಣ ಜ.7 ರಂದು ಪುರಸಭಾ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಬಂಟ್ವಾಳ ಪುರಸಭಾ ಕನಿಷ್ಠ ವೇತನ ಮತ್ತು ಹೊರಗುತ್ತಿಗೆ ನೌಕರರು ಸಂಬಂಧಿಸಿದ ಅಧಿಕಾರಿಗಳಿಗೆ ಅಧಿಕೃತವಾದ ಸಂದೇಶವನ್ನು ಪತ್ರದ ಮೂಲಕ ತಿಳಿಸಿದ್ದಾರೆ.

ಬಂಟ್ವಾಳ ಪುರಸಭೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಹುದ್ದೆಗಳಡಿ ಪ್ರಾಮಾಣಿಕವಾಗಿ ಸೇವೆಯನ್ನು ನೀಡುತ್ತಾ ಬಂದಿರುವ ಕನಿಷ್ಠ ವೇತನ ಮತ್ತು ಹೊರಗುತ್ತಿಗೆ ನೌಕರರಿಂದ ಪುರಸಭಾ ಇಲಾಖೆಯ ಕೆಲಸ ಕಾರ್ಯಗಳು ಅತ್ಯಂತ ಸಲೀಸಾಗಿ ನಡೆಯುತ್ತಿದ್ದು, ಇದುವರೆಗೂ ಅವರ ಸೇವೆಯು ಯಾವುದೇ ರೂಪದಲ್ಲಿ ಖಾಯಂಗೊಂಡಿರುವುದಿಲ್ಲ. ಆದರೆ ಕಳೆದ ಎರಡು ತಿಂಗಳಿನಿಂದ ವೇತನ ಪಾವತಿಯಾಗದೆ ಊಟಕ್ಕೂ ತೊಂದರೆಯಾಗಿದೆ. ಅದಕ್ಕೆ ಮೊದಲು ಯಾವುದೇ ಅಡ್ಡಿ ಅಂತಕ ಇಲ್ಲದೆ ವೇತನವನ್ನು ಪಾವತಿಸಿರುತ್ತಾರೆ. ಆದರೆ ನವೆಂಬರ್-2025 ಮತ್ತು ಡಿಸೆಂಬರ್-2025ರ ಮಾಸಿಕ ವೇತನ ಪಾವತಿಯಾಗದೇ ನಮ್ಮ ಜೀವನ ನಿರ್ವಹಣೆಗೆ ಹಾಗೂ ಬ್ಯಾಂಕ್ ಸಾಲ, ಕೈ ಸಾಲ ಮಾಡಿರುವುದನ್ನು ತೀರಿಸಲು ಸಾಧ್ಯವಾಗದೆ ಕಂಗಲಾಗಿದ್ದೇವೆ. ಆದ್ದರಿಂದ ನಾವು ಜ.7 ರಂದು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ನ್ಯಾಯಕ್ಕಾಗಿ ಪುರಸಭಾ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸುವುದಾಗಿ ತೀರ್ಮಾನಿಸಿದ್ದೇವೆ ಎಂದು ತಿಳಿಸಲಾಗಿದೆ

- Advertisement -

Related news

error: Content is protected !!