Wednesday, July 22, 2026
spot_imgspot_img
spot_imgspot_img

ಗುಣಶ್ರೀ ವಿದ್ಯಾಲಯ ಕುಳ–ಕುಂಡಡ್ಕದಲ್ಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ

- Advertisement -
- Advertisement -

ಕುಳ–ಕುಂಡಡ್ಕ: ದಿನಾಂಕ 30-12-2025 ರಂದು ಮಂಗಳವಾರ ಗುಣಶ್ರೀ ವಿದ್ಯಾಲಯ ಕುಳ–ಕುಂಡಡ್ಕದಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.

ಸಂಜೆ 6.30ರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಅಂಗನವಾಡಿ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿದ್ದು, ರಾತ್ರಿ 8.00ಕ್ಕೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮಕ್ಕೆ ಮನ್ ದೇವ್ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ), ಮಂಗಳೂರು ಇದರ ಅಧ್ಯಕ್ಷರು ಹಾಗೂ ಗುಣಶ್ರೀ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾಲತಿ ಕೆ., ಪಿಂಗಾರ ತೋಟಗಾರಿಕಾ ಸಂಸ್ಥೆ ನಿರ್ದೇಶಕರಾದ ಸಾಯಿಗೀತಾ ಹೆಗಡೆ ಚಂದಾಡಿ, ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇದರ ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು, ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪ್ ಸೊಸೈಟಿ ಬೆಳ್ಳಾರೆ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕ ಚಂದ್ರಹಾಸ ಶೆಟ್ಟಿ ಪಿಲಿಂಜ, ಗುಣಶ್ರೀ ವಿದ್ಯಾಲಯ ಸಿದ್ಧಕಟ್ಟೆ ಸಂಚಾಲಕ ವಿಜಯಕುಮಾರ್ ಚೌಟ, ಶ್ರೀ ವಿಷ್ಣುಮೂರ್ತಿ ಯುವಕ ಮಂಡಲ ಕುಂಡಡ್ಕ ಇದರ ಅಧ್ಯಕ್ಷರಾದ ಮನೋಜ್ ಕಂಪ, ಶಾಲಾ ಸಂಚಾಲಕ ವೇಣುಗೋಪಾಲ ಶೆಟ್ಟಿ ಮರುವಾಳ ಹಾಗೂ ಶಾಲಾ ವಿದ್ಯಾರ್ಥಿ ನಾಯಕ ಹರ್ಷಿತ್ ಉಪಸ್ಥಿತರಿದ್ದರು.


ಮುಖ್ಯ ಶಿಕ್ಷಕ ಪ್ರವೀಣ್ ಶೆಟ್ಟಿ ಮೈರ ಅವರು ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು. ಮುಖ್ಯ ಅತಿಥಿ ರಾಧಾಕೃಷ್ಣ ಎರುಂಬು ಮಾತನಾಡಿ, “ಸರ್ವರೂ ಒಗ್ಗೂಡಿದಾಗ ಮಾತ್ರ ಶಾಲೆಯ ಸರ್ವಾಂಗೀಣ ಪ್ರಗತಿ ಸಾಧ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಸಂಚಾಲಕ ವೇಣುಗೋಪಾಲ ಶೆಟ್ಟಿ ಮರುವಾಳ ಅವರು ಸ್ವಾಗತ ಭಾಷಣ ಮಾಡಿದ್ದು, ಸಹಶಿಕ್ಷಕಿ ಶೃತಿಕಾ ವಂದಿಸಿದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ಕುಮಾರಿ ಪ್ರಮೀಳಾ ಹಾಗೂ ಕುಮಾರಿ ಕಾವ್ಯಶ್ರೀ ಅವರು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದು, ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನವಾಯಿತು.

- Advertisement -

Related news

error: Content is protected !!