Tuesday, July 21, 2026
spot_imgspot_img
spot_imgspot_img

ನೆಲ್ಯಾಡಿ: ಅಂಗಡಿ ಮುಂಭಾಗ ನಿಲ್ಲಿಸಿದ್ದ ಸ್ಕೂಟರ್ ಕಳವು -ದೂರು

- Advertisement -
- Advertisement -

ನೆಲ್ಯಾಡಿ: ಅಂಗಡಿ ಮುಂಭಾಗ ನಿಲ್ಲಿಸಿದ್ದ ಸ್ಕೂಟರ್ ಕಳವುಗೊಂಡಿರುವ ಘಟನೆ ಡಿ.31ರಂದು ರಾತ್ರಿ ನೆಲ್ಯಾಡಿಯಲ್ಲಿ ನಡೆದಿದೆ.
ಕೊಕ್ಕಡ ನಿವಾಸಿ ಅನಿಲ್‌ಕುಮಾರ್ ಕೆ. ಅವರು ನೆಲ್ಯಾಡಿ ಪೇಟೆಯಲ್ಲಿರುವ ವಿ.ಜೆ.ಕಾಂಪ್ಲೆಕ್ಸ್‌ನಲ್ಲಿ ಇಲೆಕ್ಟ್ರಿಕಲ್ ಅಂಗಡಿ ಹೊಂದಿದ್ದು, ಪ್ರತಿದಿನ ಅಂಗಡಿಗೆ ಬಂದು ಅಂಗಡಿ ಮುಂಭಾಗ ತಮ್ಮ ಯಮಹಾ ಕಂಪೆನಿಯ ಸ್ಕೂಟರ್ (ಕೆಎ 03, ಕೆಎ 7348) ನಿಲ್ಲಿಸುತ್ತಿದ್ದರು.

ಅದರಂತೆ ಡಿ.31ರಂದು ಬೆಳಿಗ್ಗೆ ಅಂಗಡಿಗೆ ಬಂದು ಸ್ಕೂಟರ್ ನಿಲ್ಲಿಸಿ ಕೀ ಅದರಲ್ಲಿಯೇ ಬಿಟ್ಟು ಅಂಗಡಿಯ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ರಾತ್ರಿ 11 ಗಂಟೆಗೆ ವ್ಯವಹಾರ ಮುಗಿಸಿ ಅಲ್ಲಿಯೇ ಸ್ವಲ್ಪ ದೂರದಲ್ಲಿರುವ ಜೀವನ್ ಎಂಬವರ ವೆಲ್ಡಿಂಗ್ ಶಾಪ್ ಗೆ ಹೋಗಿ ಅವರ ಜೊತೆಯಲ್ಲಿ ಮಾತನಾಡಿ ವಾಪಾಸು 11.45ಕ್ಕೆ ಸ್ಕೂಟರ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ಸ್ಕೂಟರ್ ನಾಪತ್ತೆಯಾಗಿತ್ತು. ಕಳ್ಳರು ಸ್ಕೂಟರ್ ಕಳ್ಳತನ ಮಾಡಿದ್ದು, ಇದರ ಮೌಲ್ಯ 45 ಸಾವಿರ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಅನಿಲ್‌ಕುಮಾರ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

- Advertisement -

Related news

error: Content is protected !!