Wednesday, July 22, 2026
spot_imgspot_img
spot_imgspot_img

ಮಂಗಳೂರು: ಕಂಬಳಕ್ಕೆಂದು ಕೋಣಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯ ಮೇಲೆ ದಾಳಿ; ಮೂವರ ವಿರುದ್ಧ ಪ್ರಕರಣ ದಾಖಲು…

- Advertisement -
- Advertisement -

ಮಂಗಳೂರು: ಜ.1 ರಂದು ಕಂಬಳಕ್ಕೆಂದು ಕೋಣಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯಿಂದ ಸುಲಿಗೆ ಮಾಡಲು ದಾಳಿ ಮಾಡಿದ್ದ 3 ಜನರ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ.

ಆ ಮೂವರಲ್ಲಿ ಒಬ್ಬರ ವಿರುದ್ಧ ಒಂದು ಕೊಲೆ ಪ್ರಕರಣ, ಎರಡು ಕೊಲೆ ಯತ್ನದ ಪ್ರಕರಣ ಹಾಗೂ ಡೆಕಾಯ್ಟ್ ಪ್ರಕರಣ ಸೇರಿದಂತೆ 5 ಕೇಸ್ ಗಳು ಬಾಕಿಯಿತ್ತು, ಅದೇ ರೀತಿ ಇನ್ನೋರ್ವರ ವಿರುದ್ಧ 307 ಪ್ರಕರಣ, ಜಾತಿನಿಂದನೆ ಪ್ರಕರಣ ಸೇರಿದಂತೆ 3 ಕೇಸ್ ಗಳು ಬಾಕಿಯಿದೆ.

ಇವರೆಲ್ಲರ ವಿರುದ್ಧ KCOCA ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲು ಆದೇಶ ನೀಡಲಾಗಿದ್ದು, ತನಿಖಾಧಿಕಾರಿಗಳು ಈಗಾಗಲೇ ವರದಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.

- Advertisement -

Related news

error: Content is protected !!