- Advertisement -
- Advertisement -






ಮಂಗಳೂರು: ಲವ್ ಫೇಲ್ಯೂರ್ ಆದ ಕಾರಣ ಸೇತುವೆಯಿಂದ ನದಿಗೆ ಹಾರಿ ಜೀವಾಂತ್ಯಗೊಳಿಸಿದ ಘಟನೆ ಗುರುಪುರದಲ್ಲಿ ನಡೆದಿದೆ. ಮೂಡಬಿದಿರೆಯ ಕಡೆಪಲ್ಲ ನಿವಾಸಿ ನವ್ಯಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಗೆಳತಿಯ ಜೊತೆ ಮಧ್ಯಾಹ್ನ ಸ್ಕೂಟರ್‌ನಲ್ಲಿ ಬಂದ ಈಕೆ ಗುರುಪುರ ಸೇತುವೆ ಬಳಿ ತಲುಪಿದಾಗ ಸ್ಕೂಟಿ ನಿಲ್ಲಿಸಲು ಹೇಳಿ ತಾನು ನದಿಗೆ ಹಾರುತ್ತೇನೆಂದು ಹೇಳಿ ದಿಢೀರ್ ಹಾರಿದ್ದಾಳೆ. ಈ ವೇಳೆ ಸ್ನೇಹಿತೆ ಕೈ ಹಿಡಿದು ಆಕೆಯನ್ನು ಎಳೆದರೂ ಕೂಡಾ ನವ್ಯಾ ನದಿಗೆ ಹಾರಿ ಜೀವ ಬಿಟ್ಟಿದ್ದಳು. ವಿಷಯ ತಿಳಿದ ಕೂಡಲೇ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಶವವನ್ನು ಮೇಲಕ್ಕೆತ್ತಿದ್ದಾರೆ.
- Advertisement -








