Wednesday, July 22, 2026
spot_imgspot_img
spot_imgspot_img

ವಿಟ್ಲ: ತಾಯಿ-ಮಗಳು ನಾಪತ್ತೆ! ದೂರು ದಾಖಲು

- Advertisement -
- Advertisement -

ವಿಟ್ಲ: ಠಾಣಾ ವ್ಯಾಪ್ತಿಯಲ್ಲಿ ತಾಯಿ, ಮಗಳು ನಾಪತ್ತೆಯಾಗಿದ್ದು, ಕೊಳ್ನಾಡು ಅಗರಿ ಮನೆ ಸಾಲೆತ್ತೂರು ಎಂಬಲ್ಲಿನ ಮಹಮ್ಮದ್ ಮುಸ್ತಾಫ(30ವ.) ಎಂಬವರು ಈ ಕುರಿತು ದೂರು ನೀಡಿದ್ದಾರೆ. ತಾಯಿ ಮತ್ತು ಅಕ್ಕ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ತಾಯಿ ಸಾರಮ್ಮ ಮತ್ತು ಅಕ್ಕ ನೆಫಿಸತುಲ್ ಮಿಶ್ರೀಯಾ ನಾಪತ್ತೆಯಾದವರು.

ಮಹಮ್ಮದ್ ಮುಸ್ತಾಫರವರು ಜ.05ರಂದು ಬೆಳಿಗ್ಗೆ ನಾಟೆಕಲ್ ಮದರಸದಲ್ಲಿ ಪಾಠ ಮಾಡಲು ಹೋಗಿ ವಾಪಸ್ ಮನೆಗೆ ಬಂದಿದ್ದ ವೇಳೆ ತಾಯಿ ಸಾರಮ್ಮ ಹಾಗೂ ಅಕ್ಕ ನೆಫಿಸತುಲ್ ಮಿಶ್ರೀಯಾರವರು ಮನೆಯಲ್ಲಿ ಇದ್ದರು.ನಂತರ ಅವರು ಪತ್ನಿಯನ್ನು ಆಕೆಯ ತವರು ಮನೆ ಇರಾ ಎಂಬಲ್ಲಿಂದ ಕರೆದುಕೊಂಡು ಬಂದು ಸಂಜೆ ಮನೆಗೆ ಬಂದಾಗ ಮನೆ ಬಾಗಿಲಿಗೆ ಬೀಗ ಹಾಕಿರುವುದು ಕಂಡು ಬಂದಿತ್ತು. ಮನೆಯ ಬೀಗದ ಕೀಯನ್ನು ಪಕ್ಕದ ಮನೆಯಲ್ಲಿ ನೀಡಿ, ತಾಯಿ ಹಾಗೂ ಅಕ್ಕ ಹೋಗಿರುವ ಬಗ್ಗೆ ತಿಳಿಸಿದರು. ಆದರೆ ರಾತ್ರಿಯಾದರು ಮನೆಗೆ ಬಾರದೇ ಇರುವುದರಿಂದ ಮನೆ ಬಳಿ , ಸಾಲೆತ್ತೂರು ಪ್ರದೇಶಗಳಲ್ಲಿ ಮತ್ತು ಕುಟುಂಬಸ್ಥರ ಮನೆಗಳಲ್ಲಿ ಹುಡುಕಾಡಿದರೂ ತಾಯಿ ಮತ್ತು ಅಕ್ಕ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!