Sunday, June 14, 2026
spot_imgspot_img
spot_imgspot_img

ಅತ್ತೆ-ಮಾವನ ಮನೆಯಲ್ಲೂ ಸೊಸೆಗೆ ಹಕ್ಕು- ಸುಪ್ರೀಂ ಕೋರ್ಟ್ ತೀರ್ಪು

- Advertisement -
- Advertisement -

ನವದೆಹಲಿ: ಮನೆಯಿಂದ ಬಲವಂತವಾಗಿ ಹೊರಹಾಕಲ್ಪಟ್ಟ ಮಹಿಳೆಗೆ ಗಂಡನ ಮನೆಯಲ್ಲದೆ ಅತ್ತೆ-ಮಾವನ ಮನೆಯಲ್ಲೂ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೌಟುಂಬಿಕ ಕಲಹದಿಂದ ಅತ್ತೆ-ಮಾವನ ಮನೆಯಿಂದ ಹೊರಹಾಕಲ್ಪಟ್ಟ ಮಹಿಳೆಗೆ ಗಂಡನ ಮನೆ ಜತೆಗೆ ಅತ್ತೆ-ಮಾವನ ಮನೆಯಲ್ಲೂ ಮಹಿಳೆಗೆ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆಯು ಅತ್ತೆ-ಮಾವನ ಅಥವಾ ತಮ್ಮ ಪತಿಯ ಜತೆ ವಾಸವಿದ್ದ ಸಂಬಂಧಿಕರ ಮನೆಯ ಭಾಗವಾಗಿ ಮಹಿಳೆ ಆ ಮನೆಯಲ್ಲೇ ಉಳಿದುಕೊಳ್ಳಬಹುದು. ಶೋಷಿತ ಮಹಿಳೆ ಮನೆಯ ಪಾಲುದಾರಿಕೆ ಪಡೆಯುವ ಮೂಲಕ ತಮ್ಮ ಹಕ್ಕು ಸಾಧಿಸಲು ಅರ್ಹಳು.

ಆ ಮನೆ ಅತ್ತೆ- ಮಾವನ ಅಥವಾ ಪತಿಯ ರಕ್ತ ಸಂಬಂಧಿಕರ ಹೆಸರಿನಲ್ಲಿದ್ದರೂ ಸೊಸೆಗೆ ಹಕ್ಕು ಸಾಧಿಸುವ ಅರ್ಹತೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಹಿಂದೆ ಮಹಿಳೆಯರ ಹಕ್ಕುಗಳ ಕುರಿತಂತೆ 2007ರಲ್ಲಿ ಸುಪ್ರೀಂಕೋರ್ಟ್ ನೀಡಿದ ಗೃಹ ಹಿಂಸಾಚಾರ ಸಂತ್ರಸ್ತರಿಗೆ ಹಂಚಿಕೆಯ ಮನೆಯ ಹಕ್ಕುಗಳನ್ನು ನೀಡುವ ಹಿಂದಿನ ತೀರ್ಪನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಎಸ್.ರೆಡ್ಡಿ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಪೀಠ ತಿಳಿಸಿದ್ದು. ಗಂಡನ ಸಂಬಂಧಿಕರ ಒಡೆತನದಲ್ಲಿದ್ದ ಮನೆಯಲ್ಲೂ ಕೂಡ ವಾಸಿಸುವ ಹಕ್ಕನ್ನು ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

- Advertisement -

Related news

error: Content is protected !!