Thursday, July 23, 2026
spot_imgspot_img
spot_imgspot_img

ಕಾಸರಗೋಡು ನಗರಸಭೆಯಲ್ಲಿ “ಯುಡಿಎಫ್” ಅಧಿಕಾರ: ಸಾಧನೆ ಮೆರೆದ “ಬಿಜೆಪಿ” !

- Advertisement -
- Advertisement -

ಕಾಸರಗೋಡು: ಕಾಸರಗೋಡು ನಗರಸಭೆಯ ಒಟ್ಟು 38 ವಾರ್ಡ್ ಗಳ ಚುನಾವಣಾ ಫಲಿತಾಂಶವನ್ನು ಘೋಷಿಸಲಾಗಿದೆ. ಅದರಂತೆ ಯುಡಿಎಫ್ (ಐಕ್ಯರಂಗ) ಅಧಿಕಾರ ಉಳಿಸಿಕೊಂಡಿದೆ. ಒಟ್ಟು ವಾರ್ಡ್ ಗಳ ಪೈಕಿ 21ರಲ್ಲಿ ಐಕ್ಯರಂಗ, 14ರಲ್ಲಿ ಎನ್‌ಡಿಎ, 1ರಲ್ಲಿ ಸಿಪಿಎಂ, 1ರಲ್ಲಿ ಮುಸ್ಲಿಂಲೀಗ್ ರೆಬಲ್, 1ರಲ್ಲಿ ಸಿಪಿಎಂ ಸ್ವತಂತ್ರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.


ಇದೇ ವೇಳೆ ತಿರುವನಂತಪುರ ನಗರಸಭೆಯಲ್ಲಿ ಮೇಯರ್ ಆಗಿದ್ದ ಕೆ.ಶ್ರೀಕುಮಾರ್ ಅವರನ್ನು ಬಿಜೆಪಿ ಅಭ್ಯರ್ಥಿ ಡಿ.ಜಿ.ಕುಮಾರನ್ ಅವರು ಪರಾಭವಗೊಳಿಸಿದರು. ಕರಿಕ್ಕಕಂ ವಾರ್ಡ್ ನಲ್ಲಿ ಕೆ.ಶ್ರೀಕುಮಾರ್ ಪರಾಭವಗೊಂಡರು.


ಅಲ್ಲದೆ ಪಾಲಕ್ಕಾಡು, ಶೋರ್ನೂರು, ಚೆಂಗನ್ನೂರು ನಗರಸಭೆಗಳಲ್ಲಿ ಬಿಜೆಪಿ ಅಧಿಕಾರದತ್ತ ಮುನ್ನುಗ್ಗುತ್ತಿದೆ. ಕಣ್ಣೂರು ಕಾರ್ಪೋರೇಶನ್‌ನಲ್ಲಿ ಬಿಜೆಪಿ ಅಕೌಂಟ್ ತೆರೆದುಕೊಂಡಿದೆ.

- Advertisement -

Related news

error: Content is protected !!