- Advertisement -
- Advertisement -





ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ತಾಪಮಾನ ಮತ್ತಷ್ಟು ಕುಸಿದಿದೆ. ಸಫರ್ಜಂಗ್ ನಲ್ಲಿ 3.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಮೂರು ವರ್ಷಗಳಲ್ಲೇ ಕನಿಷ್ಠ ಹಾಗೂ ವಾಡಿಕೆ ತಾಪಮಾನಕ್ಕಿಂತ ನಾಲ್ಕು ಡಿಗ್ರಿ ಕಡಿಮೆ ಎಂದು ಹವಾಮಾನ ಇಲಾಖೆ ಮೂಲಗಳಿಂದ ತಿಳಿದುಬಂದಿದೆ. ದೆಹಲಿಯ ಪ್ರಮುಖ ಚಳಿಮಾಪನಾ ಕೇಂದ್ರವಾಗಿರುವ ಸಫರ್ಜಂಗ್ ನಲ್ಲಿ 2023ರ ಜನವರಿ 18ರಂದು 2.6 ಡಿಗ್ರಿ ತಾಪಮಾನ ದಾಖಲಾಗಿತ್ತು. ಬುಧವಾರ ವರೆಗೂ ಇದೇ ಉಷ್ಣಾಂಶ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ರಾಜಧಾನಿಯ ಅತ್ಯಂತ ಶೀತ ಪ್ರದೇಶ ಲೋಧಿಯಲ್ಲಿ, 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಯನಗರದಲ್ಲಿ 3.2 ಡಿಗ್ರಿ ಹಾಗೂ ಪಾಲಂನಲ್ಲಿ 3.3 ಡಿಗ್ರಿ ತಾಪಮಾನ ದಾಖಲಾಗಿದೆ. ದೆಹಲಿಯ ಹಲವು ಮಾಪನಾ ಕೇಂದ್ರಗಳಲ್ಲಿ ಸೋಮವಾರ ಶೀತಗಾಳಿಯ ಅನುಭವ ಆಗಿದೆ. ಇದು ಮುಂದಿನ ಎರಡು ದಿನಗಳ ಕಾಲ ಮುಂದವರಿಯಲಿದೆ ಎಂದು ಐಎಂಡಿ ವಿಜ್ಞಾನಿ ಕೃಷ್ಣ ಮಿಶ್ರಾ ಹೇಳಿದ್ದಾರೆ.
- Advertisement -








