- Advertisement -
- Advertisement -





ಮಲಪ್ಪುರಂ: ದೇವರ ಉತ್ಸವಕ್ಕೆ ತಂದ ಆನೆಯೊಂದು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ಮಲಪ್ಪುರಂ ವಲ್ಲಿಕ್ಕುನು ಅಲ್ಲಿ ನಡೆದಿದೆ. ವಲ್ಲಿಕುನ್ನು ಅಯ್ಯಪ್ಪ ದೇವಸ್ಥಾನದ ಉತ್ಸವಕ್ಕೆ ಬಾಲುಸ್ಸೇರಿ ಗಜೇಂದ್ರನ್ ಎಂಬ ಆನೆಯನ್ನು ಕರೆತರಲಾಗಿತ್ತು. ಉತ್ಸವದ ಸಿದ್ದತೆಗೆ ಆನೆಗೆ ಸ್ನಾನ ಮಾಡಿಸುವ ವೇಳೆ ಏಕಾಏಕಿ ಆನೆ ಕುಸಿದು ಬಿದ್ದಿದೆ. ತಕ್ಷಣ ಪಶುವೈದ್ಯರು ಚಿಕಿತ್ಸೆ ನೀಡಿದರೂ ಅದಾಗಲೇ ಆನೆ ಸಾವನಪ್ಪಿದೆ. ಆನೆಯ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಅರಣ್ಯ ಇಲಾಖೆ ತನಿಖೆ ನಡೆಸುತ್ತಿದ್ದು, ನಂತರ ಅಂತ್ಯಕ್ರಿಯೆ ನಡೆಯಲಿದೆ.
- Advertisement -








