




ಸಮರ್ಪಣ್ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಪ್ರಯುಕ್ತ ಶ್ರೀದೇವರ ನಿತ್ಯೋತ್ಸವದ ಶುಭದಿನ ದಿನಾಂಕ 16-01-2026 ರಂದು ಸಮರ್ಪಣ್ ಕಲೋತ್ಸವ 2026 ಕಾರ್ಯಕ್ರಮದ ಅಂಗವಾಗಿ ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ಸೂಪರ್ ಹಿಟ್ ನಾಟಕ ರಾಘು ಮಾಸ್ಟ್ರು ತುಳು ಹಾಸ್ಯಮಯ ನಾಟಕ ನಡೆಯಿತು.ಈ ಸಂದರ್ಭ ಸಾಧಕರಿಗೆ ಗೌರವ ಸಮರ್ಪಣೆ ಹಾಗೂ ವಿದ್ಯಾ ನಿಧಿ ವಿತರಣೆ ಮತ್ತು ಆರೋಗ್ಯನಿಧಿ ವಿತರಣೆ ಕಾರ್ಯಕ್ರಮ ನಡೆಯಿತು.





ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅನೇಕ ಅತಿಥಿಗಳು ಭಾಗವಹಿಸಿದ್ದರು .ಈ ಸಮಾರಂಭದ ಅಧ್ಯಕ್ಷತೆಯನ್ನು ಸಮರ್ಪಣ್ ವಿಟ್ಲ ಇದರ ಅಧ್ಯಕ್ಷರಾದ ಶ್ರೀ ಯಶವಂತ್ N ಇವರು ವಹಿಸಿದ್ದರು. ಸಮರ್ಪಣ್ ವಿಟ್ಲ ಗೌರವಾಧ್ಯಕ್ಷರಾದ ಶ್ರೀ ಕೃಷ್ಣಯ್ಯ ವಿಟ್ಲ ಅರಮನೆ ,ಶ್ರೀ ವಿ.ನರಸಿಂಹ ವರ್ಮ, ಕಾನೂನು ಅಧಿಕಾರಿ ಕೆ ಎಸ್ ಆರ್ ಟಿ ಸಿ ಕೇಂದ್ರ ಕಚೇರಿ ಬೆಂಗಳೂರು ,ಶ್ರೀ ನಿತಿನ್ ಪಕಳ,ಮಾಲಕರು ಪುತ್ತೂರು ಪ್ರಾಪರ್ಟಿಸ್ ಪುತ್ತೂರು, ಶ್ರೀ ಶಿಶಿರ್ ಪೆರ್ವೋಡಿ, ಅಧ್ಯಕ್ಷರು ಯುವ ಮೋರ್ಚಾ ಭಾರತೀಯ ಜನತಾ ಪಾರ್ಟಿ ಪುತ್ತೂರು ಮಂಡಲ, ಶ್ರೀ ಸದಾನಂದ ಶೆಟ್ಟಿ ಅಲ್ಚಾರ್, ಉದ್ಯಮಿಗಳು ಬೆಂಗಳೂರು , ದೀಕ್ಷಿತ್ ಗೌಡ ,ಇಂಜಿನಿಯರ್ ಬೆಳಾಲು, ಶ್ರೀ ರಮಾನಾಥ ವಿಟ್ಲ ಅಧ್ಯಕ್ಷರು VRC ವಿಟ್ಲ, ಲಯನ್ ಬಿ ಪುಷ್ಪಲತಾ ನಿವೃತ್ತ ಉದ್ಯೋಗಿ ಸಣ್ಣ ನೀರಾವರಿ ಇಲಾಖೆ ಕರ್ನಾಟಕ ಸರ್ಕಾರ,ಇವರೆಲ್ಲ ಭಾಗವಹಿಸಿ ಶುಭ ಹಾರೈಸಿದರು .

ಈ ಸಮಾರಂಭದಲ್ಲಿ ಸಾಧಕರಿಗೆ ಗೌರವ ಸಮರ್ಪಣೆ ನಡೆಯಿತು .ಭಜನಾ ಸೇವೆಯಲ್ಲಿ ಸಾಧನೆಯನ್ನು ಮಾಡಿದ ಶ್ರೀ ವಿಶ್ವನಾಥ್ ದೇವಾಡಿಗ ಹಾಗೂ ಸಮಾಜಸೇವೆಯಲ್ಲಿ ಸಾಧನೆಯನ್ನು ಮಾಡಿದ ಶ್ರೀ ಬಾಲಕೃಷ್ಣ ಪೂಜಾರಿ ಸಣ್ಣಗುತ್ತು ಹಾಗೆಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ತೇಜಸ್ ಎಂ ಎಸ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು ಅಲ್ಲದೆ ಬಡ ಕುಟುಂಬಕ್ಕೆ ಆರೋಗ್ಯ ನಿಧಿ ನೀಡಲಾಯಿತು. ಶ್ರೀಯುತ ವಿಶ್ವನಾಥ್ ನಾಯ್ತೊಟ್ಟು ಹಾಗೂ ಪ್ರಕಾಶ್ ಮಾಸ್ಟರ್ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸಹಕರಿಸಿದರು . ಸಮರ್ಪಣ್ ವಿಟ್ಲ ಇದರ ಸಂಚಾಲಕರಾಗಿರುವ ಹರೀಶ್.ಕೆ ವಿಟ್ಲ ಕಾರ್ಯಕ್ರಮ ನಿರೂಪಿಸಿದರು , ಸಮರ್ಪಣ್ ಕೋಶಾಧಿಕಾರಿ ನಿಖಿಲ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ರವಿಶಂಕರ್ ವಿಟ್ಲ ವಂದಿಸಿದರು. ತುಳಸಿದಾಸ್ ಶೆಣೈ ವಿಟ್ಲ ವಂದೇ ಮಾತರಂ ಹಾಡಿದರು ,ಸಮರ್ಪಣ್ ವಿಟ್ಲ ಇದರ ಪದಾಧಿಕಾರಿಗಳಾದ , ಶ್ರವಣ್ ಆಚಾರ್ಯ,ರೋಹಿತ್ ಕಟ್ಟೆ , ರಕ್ಷಿತ್ R S , ರವಿವರ್ಮ ವಿಟ್ಲ ಅರಮನೆ,ಯಾದವ ಮಂಗಳಪದವು ,ಸೂರಜ್ ಕೋಟ್ಯಾನ್, ದೀಪಕ್ ಕಟ್ಟೆ ,ಪವನ್ ಕಟ್ಟೆ ,ಮನೋಜ್ ವಿಟ್ಲ ,ಸುಜನ್ ,ಕೀರ್ತನ್ , ಸಂದೀಪ್ ಕಿರೋಡಿಯನ್ , ಪೂಜಿತ್ ಮುಂತಾದವರು ಸಹಕರಿಸಿದರು.








