Wednesday, July 22, 2026
spot_imgspot_img
spot_imgspot_img

ದಾಖಲೆಗೂ ಜ್ಞಾನಕ್ಕೂ ಕ್ಲಿಕ್ ಹೊಡೆದ ಯುವ ಪ್ರತಿಭೆ

- Advertisement -
- Advertisement -

'ನ್ಯಾಷನಲ್ ಬುಕ್ ಆಫ್ ರೆಕಾರ್ಡ್'ನಲ್ಲಿ ದಾಖಲೆಗೈದು ಫೋಟೋಗ್ರಫಿ ಕುಂಚದಲ್ಲಿ ಅರಳುತ್ತಿರುವ ವಿಟ್ಲದ ಸುದರ್ಶನ್…

✍️ ರಕ್ಷಿತಾ ದಾರೆಪಡ್ಪು

ಪದಗಳಲ್ಲಿ ವರ್ಣಿಸಲಾಗದ ಅದೆಷ್ಟೋ ಭಾವನೆಗಳನ್ನು, ಸುಂದರ ಕ್ಷಣಗಳನ್ನು, ಮತ್ತೆ ಮರುಕಳಿಸುವಂತೆ ಸೆರೆ ಹಿಡಿಯುವ ಒಂದು ಅದ್ಭುತ ಕಲೆ “ಫೋಟೋಗ್ರಾಫಿ”. ಒಬ್ಬ ವ್ಯಕ್ತಿಗೆ ಅದೆಷ್ಟೋ ನೋವುಗಳಿದ್ದರೂ ಸಹ ಕ್ಯಾಮರ ಕಣ್ಣೆದುರು ಬಂದರೆ ಸಾಕು ತನ್ನ ನೋವುಗಳನ್ನು ಮರೆತು ನಗುಮುಖ ತೋರುತ್ತಾನೆ. ಆ ನೋವಿನಲ್ಲೂ ನಗುವಿನ ಚಿತ್ರಣವನ್ನು ಮನಸ್ಸಿಗೆ ಮುಟ್ಟುವಂತೆ ಸೆರೆ ಹಿಡಿಯುವವನು ಫೋಟೋಗ್ರಾಫರ್.

ಸಾಧಿಸುವ ಛಲವಿದ್ದ ವ್ಯಕ್ತಿಗೆ ಅಸಾಧ್ಯವೆಂಬುದೇ ಇಲ್ಲ. ಎಂಬ ಮಾತು ಅಕ್ಷರಶಃ ಸತ್ಯ. ತನ್ನ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಜೊತೆಗೆ ಕ್ಲೌಡ್ ಇಂಜಿನಿಯರಿಂಗ್ ಮತ್ತು ಸೀನಿಮ್ಯಾಟೋಗ್ರಾಫಿಕ್ ಎರಡು ಕ್ಷೇತ್ರಗಳಲ್ಲಿ ತನ್ನ ಚಾಪನ್ನು ಮೂಡಿಸಿ ಸಾಧನೆಯ ಶಿಖರವನೆರುತ್ತಿರುವ ಸುದರ್ಶನ್ ಮೂಲತಃ ವಿಟ್ಲ ಮೂಲದ ಮಾಣಿಲದ ಕೃಷ್ಣಪ್ಪ ಪೂಜಾರಿ ಮತ್ತು ರತ್ನಾವತಿ ದಂಪತಿಗಳ ಸುಪುತ್ರನಾಗಿ 2002 ಜೂನ್ 4ರಂದು ಜನಿಸಿದರು.

ಸುದರ್ಶನ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುರುವ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿ
ಪ್ರೌಢ ಶಿಕ್ಷಣವನ್ನು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾದಲ್ಲಿ ಅಭ್ಯಹಿಸಿದ್ದಾರೆ. ಬಳಿಕ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿ, ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಬಿಸಿಎ ಕ್ಲೌಡ್ ಟೆಕ್ನಾಲಜಿ ಮತ್ತು ಇನ್ಫಾರ್ಮಷನ್ ಸೆಕ್ಯೂರಿಟಿ ಪದವಿಯನ್ನು ಪಡೆದು ಗೂಗಲ್ ಕ್ಲೌಡ್ ಬೆಂಗಳೂರು (Google Cloud Tech Hive) ಮೂಲಕ ಉದ್ಯೋಗವಕಾಶ ಪಡೆದುಕೊಂಡರು. ಇಂಟರ್ನ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು ಪ್ರಸ್ತುತ ನಿವೆಸ್ ಸೊಲ್ಯೂಷನ್ ( Niveus solutions) ಸಂಸ್ಥೆಯಲ್ಲಿ ಕ್ಲೌಡ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾಧನೆಗಳು ಮತ್ತು ಪ್ರಶಸ್ತಿಗಳು:

  • ಟಿಸಿಎಸ್ (TCS) ಸಂಸ್ಥೆ ನಡೆಸಿದ ರಾಷ್ಟ್ರಮಟ್ಟದ ಐಟಿ (IT) ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
  • ಜಾಗತಿಕ ಮಟ್ಟದ ಛಾಯಾಗ್ರಾಹಣ ಸ್ಪರ್ಧೆಯಲ್ಲಿ 134ನೇ ಸ್ಥಾನವನ್ನು ಪಡೆದು ಪ್ರಶಂಸಾ ಪತ್ರ ಹಾಗೂ ಪದಕವನ್ನು ಗಳಿಸಿದ್ದಾರೆ.
  • ಬಳಿಕ ಕ್ಲೌಡ್ಎಂಜಿನಿಯರಿಂಗ್ ಮತ್ತು ಸೀನಿಮ್ಯಾಟೋಗ್ರಾಫಿಕ್ ಉಧ್ಯಮಶೀಲತೆ ಎಂಬ ಎರಡು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದ ಸುದರ್ಶನ್ ರವರಿಗೆ 17 ಜನವರಿ 2025ರಲ್ಲಿ ‘ನ್ಯಾಷನಲ್ ಬುಕ್ ಆಫ್ ರೆಕಾರ್ಡ್’ ಲಭಿಸಿದೆ.

ರೀಲ್ಸ್ ಸ್ಪರ್ಧೆಗಳ ಸಾಧನೆ:

  • ಐಕಳ ಬಾವ ಕಂಬಳ ರೀಲ್ಸ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದು ಈ ರೀಲ್ ಗೆ 2.29 ಲಕ್ಷ ವೀಕ್ಷಣೆಗಳು ದೊರೆತಿದೆ.
  • ಸ್ಟಾರ್ ನೈಟ್ ವಿಟ್ಲ -2025 ರೀಲ್ಸ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು.
  • ಪುತ್ತೂರು ಕಂಬಳ ರೀಲ್ಸ್ ಸ್ಪರ್ಧೆಯ ವಿಜೇತರಾಗಿದ್ದು ಈ ರೀಲ್ ಗೆ 1.62 ಲಕ್ಷ ವೀಕ್ಷಣೆಗಳು ಲಭಿಸಿದೆ.
  • ಧರ್ಮಚಾವಡಿ ರೀಲ್ಸ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದು ಈ ರೀಲ್ಸ್ ಗೆ 2.50 ಲಕ್ಷ ವೀಕ್ಷಣೆಗಳು ದೊರೆತಿದೆ.
    ಇದಲ್ಲದೆ ಲಂಚುಲಾಲ್ ನೆತ್ತರಕೆರೆ ಸಿನಿಮಾ ರೀಲ್ಸ್ ಸ್ಪರ್ಧೆಯಲ್ಲಿ (Best Content) ವಿಶೇಷ ಪ್ರಶಸ್ತಿ ಲಭಿಸಿದೆ.
  • ಮಂಗಳೂರು ಕಂಬಳ ಛಾಯಾಗ್ರಾಹಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
  • ಮಂಗಳೂರು ಕಂಬಳ ರೀಲ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
  • ಬಳಿಕ ಇವರು 2025 ರಲ್ಲಿ ‘ದಿಟ್ಟಿ ಫ್ರೇಮ್ಸ್ ಫೋಟೋಗ್ರಫಿ ಮತ್ತು ಸೀನಿಮ್ಯಾಟೋಗ್ರಾಫಿ’ ಸಂಸ್ಥೆಯನ್ನು ಪ್ರಾರಂಭಿಸಿದರು. ಅಲ್ಪ ಸಮಯದಲ್ಲೇ ಸಂಸ್ಥೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಒಂದು ವರ್ಷದೊಳಗೆ 250ಕ್ಕೂ ಹೆಚ್ಚು ಗ್ರಾಹಕರನ್ನು ತಲುಪಿದೆ.

ಇವರು 2025ರಲ್ಲಿ ದಿಟ್ಟಿ ಫ್ರೇಮ್ಸ್ ಎಂಬ ತಂಡವನ್ನು ರಚಿಸಿ ಪ್ರಸ್ತುತ ಇದರಲ್ಲಿ 5ಕ್ಕೂ ಹೆಚ್ಚು ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ದಯಾ ಕ್ರಿಯೆಷನ್ ತಂಡವು ಇವರ ಈ ಅತ್ಯುತ್ತಮ ಸೇವೆ ಮತ್ತು ಸೃಜನಾತ್ಮಕ ಕಾರ್ಯಗಳನ್ನು ಗುರುತಿಸಿ ಸನ್ಮಾನಿಸಿದೆ.ಹೀಗೆ ಫೋಟೋಗ್ರಾಫಿಯ ಕುಂಚದಲ್ಲಿ ತೊಡಗಿಸಿಕೊಂಡಿರುವ ಸುದರ್ಶನ್ ಅವರ ಮುಂದಿನ ಜೀವನವೂ ಸುಖಮಯವಾಗಿರಲಿ

✍️ ರಕ್ಷಿತಾ ದಾರೆಪಡ್ಪು

- Advertisement -

Related news

error: Content is protected !!