


ಬೆಳ್ತಂಗಡಿ; ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಕಾಯ್ದೆ ವಿರೋಧಿಸಿ ಕೊಕ್ಕಡದಲ್ಲಿ ಅಖಿಲ ಭಾರತ ಮುಷ್ಕರ ಪ್ರಚಾರದ ಅಂಗವಾಗಿ ನಡೆದ ವಾಹನ ಜಾಥಾ ಕಾರ್ಯಕ್ರಮದ ವೇಳೆ ತಂಡವೊಂದು ‘ಮೋದಿ ಮೋದಿ’ ಎಂಬ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ವಾಹನ ಜಾಥಾದ ಅಂಗವಾಗಿ ಕೊಕ್ಕಡದಲ್ಲಿ 7 ಗಂಟೆಯ ಸುಮಾರಿಗೆ ಸಭಾ ಕಾರ್ಯಕ್ರಮ ನಡೆಯುತ್ತಿದ್ದು, ಈ ವೇಳೆ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಿದ್ದರು.ಈ ಸಂದರ್ಭ ಏಕಾಏಕಿ ಸುಮಾರು 20 ಮಂದಿಯ ಗುಂಪು ಸೇರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದು, ‘ಮೋದಿ ಮೋದಿ’ ಎಂಬ ಘೋಷಣೆಯನ್ನು ಕೂಗುತ್ತಾ ಇದ್ದರು. ಈ ವೇಳೆ ಸಭಾ ಕಾರ್ಯಕ್ರಮ ಮುಗಿಸಿ ಜಾಥಾ ಹಿಂತಿರುಗಿದೆ. ಈ ಬಗ್ಗೆ ಜಾಥಾದ ನೇತೃತ್ವ ವಹಿಸಿದ್ದ ಬಿ.ಎಂ ಭಟ್ ಅವರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
ಸಿಪಿಐಎಂ ಖಂಡನೆ;- ಕಾರ್ಮಿಕರ, ರೈತರ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಹಮ್ಮಿಕೊಂಡಿದ್ದ ವಾಹನ ಜಾಥಾ ವೇಳೆ ಕಿಡಿಗೇಡಿಗಳ ತಂಡ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿರು ವುದು ಖಂಡನೀಯ ಎಂದು ಸಿಪಿಐಎಂ ತಾಲೂಕು ಸಮಿತಿ ಕಾರ್ಯದರ್ಶಿ ಬಿ. ಭಟ್ ತಿಳಿಸಿದ್ದಾರೆ.
ಸರಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ, ರೈತ ವಿರೋಧಿಯ ವಿರುದ್ಧ ಕಾರ್ಮಿಕ ಸಂಘಟನೆಗಳು ನಡೆಸು ತ್ತಿರುವ ಹೋರಾಟ ನಿರಂತರವಾಗಿ ಮುಂದಿವರಿಯಲಿದೆ ಎಂದಿರುವ ಅವರು ಕಾರ್ಮಿಕರ ಹೋರಾಟದಿಂದ ಭಯ ಗೊಂಡಿರುವ ಬಿಜೆಪಿ ಹಾಗು ಬೆಂಬಲಿಗರು ಪ್ರಚಾರ ಜಾಥಾಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಫೆ.12 ರಂದು ನಡೆಯುವ ಅಖಿಲ ಭಾರತ ಮಯಷ್ಕರವನ್ನು ಯಶಸ್ವಿಗೊಳಿಸಲು ಸಿಪಿಐಎಂ ಪಕ್ಷ ಬೆಂಬಲ ನೀಡಲಿದೆ. ಮುಷ್ಕರ ಯಶಸ್ವಿ ಯಾಗಿಸಲು ಎಲ್ಲರೂ ಪ್ರಯತ್ನಿಸುವಂತೆ ಬಿ.ಎಂ ಭಟ್ ಕರೆ ನೀಡಿದ್ದಾರೆ.








