Monday, July 27, 2026
spot_imgspot_img
spot_imgspot_img

ಬಿಹಾರ: ಆರು ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ- ಓರ್ವನ ಬಂಧನ

- Advertisement -
- Advertisement -

ಪಾಟ್ನಾ: ಬಿಹಾರದ ದರ್ಭಾಂಗ ಪಟ್ಟಣದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ,ಕೊಲೆಗೈದ ಘಟನೆ ರವಿವಾರ ವರದಿಯಾಗಿದೆ. ಬಾಲಕಿಯ ಮೃತದೇಹವು ವಿಶ್ವವಿದ್ಯಾನಿಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೆರೆಯೊಂದರ ಬಳಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿಕಾಸ್ ಮಹಾತೋ ಎಂಬ ಸ್ಥಳೀಯ ನಿವಾಸಿಯನ್ನು ಬಂಧಿಸಿದ್ದಾರೆ.

ಶನಿವಾರ ಸಂಜೆ ಬಾಲಕಿಯು ತನ್ನದೇ ವಯಸ್ಸಿನ ಇತರ ಇಬ್ಬರು ಬಾಲಕಿಯರ ಜೊತೆ ಆಟವಾಡಲೆಂದು ತೆರಳಿದ್ದಳು. ಕತ್ತಲಾದರೂ ಮರಳದೇ ಇದ್ದಾಗ, ಆತಂಕಗೊಂಡ ಮನೆಯವರು ಹಾಗೂ ನೆರೆಹೊರೆಯವರು ಆಕೆಗಾಗಿ ಹುಡುಕಾಡಿದ್ದರು

ರವಿವಾರ ನಸುಕಿನ ವೇಳೆ ನಿರ್ಜನ ಪ್ರದೇಶದಲ್ಲಿರುವ ಕೆರೆಯೊಂದರ ಬಳಿ ನಾಯಿಗಳು ಬೊಗಳುವ ಸದ್ದು ಕೇಳಿ, ಅವರು ಅಲ್ಲಿಗೆ ಧಾವಿಸಿದಾಗ ರಕ್ತದ ಮಡುವಿನ ಮಧ್ಯೆ ಬಾಲಕಿಯ ಮೃತದೇಹ ಬಿದ್ದಿರುವುದು ಕಂಡುಬಂದಿತ್ತು.

ಕುಟುಂಬಿಕರು ನೀಡಿದ ದೂರಿಂತೆ, ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದ್ದರು.

ಕೆರೆಯ ಬಳಿ ಈ ಮೂವರು ಬಾಲಕಿಯರು ಆಟವಾಡುತ್ತಿದ್ದಾಗ ಆರೋಪಿಯು ಅವರೆಲ್ಲರನ್ನೂ ಅಪಹರಿಸಲು ಯತ್ನಿಸಿದ್ದ ಆದರೆ ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅವರು ನಡೆದ ಘಟನೆಯನ್ನು ಮನೆಯವರಿಗೆ ವಿವರಿಸಿದ್ದರು. ತನಿಖೆ ಸಂದರ್ಭ ಈ ಇಬ್ಬರು ಬಾಲಕಿಯರಿಗೆ, ಪೊಲೀಸರು ಪರಿಸರದಲ್ಲಿನ ಸಿಸಿಟಿವಿ ಕ್ಯಾಮರಾದ ದೃಶ್ಯಗಳು ತೋರಿಸಿದಾಗ ಅವರು ಆರೋಪಿ ವಿಕಾಸ್ ಮಹಾತೋನನ್ನು ಗುರುತಿಸಿದ್ದರು. ಆನಂತರ ಪೊಲೀಸರು ವಿಕಾಸ್ ಮಹಾತೋನ ಮನೆಗೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಬಂಧನದ ಸಂದರ್ಭ ಆತನ ಬಟ್ಟೆಗಳಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!