- Advertisement -
- Advertisement -



ತಿರುವನಂತಪುರಂ: ಗೋವಿಂದಪುರ ಮೂಲದ ಯು.ದೀಪಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತಳಾಗಿದ್ದ ಶಿಮ್ಜಿತಾ ಮುಸ್ತಫಾಗೆ ಕೇರಳದ ಕೋಝಿಕ್ಕೋಡ್ ಸೆಷನ್ಸ್ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ಜನವರಿ 22ರಂದು ಶಿಮ್ಜಿತಾಳನ್ನು ಬಂಧಿಸಲಾಗಿತ್ತು. 19 ದಿನಗಳ ನ್ಯಾಯಾಂಗ ಬಂಧನದ ನಂತರ ಅವರಿಗೆ ಜಾಮೀನು ನೀಡಲಾಗಿದೆ.

ವಶಪಡಿಸಿಕೊಂಡ ಮೊಬೈಲ್ ಫೋನ್ಗೆ ಸಂಬಂಧಿಸಿದ ವಿಧಿವಿಜ್ಞಾನ ವರದಿಗಳು ಇನ್ನೂ ಹೊರಬರಬೇಕಿದೆ ಮತ್ತು ಜಾಮೀನು ನಡೆಯುತ್ತಿರುವ ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ಉಲ್ಲೇಖಿಸಿ ಪ್ರಾಸಿಕ್ಯೂಷನ್ ಜಾಮೀನನ್ನು ವಿರೋಧಿಸಿತ್ತು.
ಜನವರಿ 18 ರಂದು ಕೋಝಿಕ್ಕೋಡ್ ನಗರದ ಗೋವಿಂದಪುರಂ ಬಳಿಯ ತನ್ನ ಮನೆಯಲ್ಲಿ ದೀಪಕ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಕಣ್ಣೂರು ಜಿಲ್ಲೆಯಲ್ಲಿ ಬಸ್ ಪ್ರಯಾಣದ ಸಮಯದಲ್ಲಿ ದೀಪಕ್ ಕಿರುಕುಳ ನೀಡಿದ್ದಾರೆ ಎಂದು ಶಿಮ್ಜಿತಾ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ ವೀಡಿಯೊವನ್ನು ಚಿತ್ರೀಕರಿಸಲಾಗಿತ್ತು.
- Advertisement -







