Friday, July 24, 2026
spot_imgspot_img
spot_imgspot_img

ಕಾಸರಗೋಡು: ಸೋಷಿಯಲ್ ಮೀಡಿಯಾ ಇನ್ನುಯೆನ್ಸರ್ ‘ಚಿನ್ನು ಪಾಪು ಆತ್ಮಹತ್ಯೆ ಬೆನ್ನಲ್ಲೇ ಇನ್ನೊಂದು ಶಾಕ್ – ಚಿನ್ನು ಪಾಪು ‘ ಆಪ್ತ ಸ್ನೇಹಿತನೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

- Advertisement -
- Advertisement -

ಕಾಸರಗೋಡು: ಸಾಮಾಜಿಕ ಮಾಧ್ಯಮ ಪ್ರಭಾವಿ ಚಿನ್ನು ಪಾಪು ಎಂದು ಜನಪ್ರಿಯರಾಗಿದ್ದ ರೇಷ್ಮಾಕೆ ಅವರ ಸಾವಿನ ಕೆಲವೇ ದಿನಗಳ ಬಳಿಕ ಅವರ ಆಪ್ತ ಸ್ನೇಹಿತ ಸಂದೇಶ್ ಕೆ. ಕಾಸರಗೋಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರವಿವಾರ ಬೆಳಕಿಗೆ ಬಂದಿದೆ.

ಮನ್ನಿಪಾಡಿಯಲ್ಲಿರುವ ತಮ್ಮ ನಿವಾಸದೆ ಕೋಣೆಯಲ್ಲಿ ಸಂದೇಶ್ ಕೆ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಕಾಸರಗೋಡು ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸರ ಪ್ರಕಾರ, ಸಂದೇಶ್ ಅವರು ಸಾಮಾಜಿಕ ಮಾಧ್ಯಮ ಪ್ರಭಾವಿ, Instagram ನಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿರುವ ಚಿನ್ನು ಪಾಪು ಎಂದೇ ಪರಿಚಿತರಾಗಿದ್ದ ರೇಷ್ಮಾಕೆ ಅವರ ಆಪ್ತ ಸ್ನೇಹಿತರಾಗಿದ್ದರು.

ಫೆ. 9ರಂದು ರೇಷ್ಮಾ ಕಾಸರಗೋಡು ಸಮೀಪದ ಕುಡ್ಲುವಿನ ಆಝಾದ್ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಆತ್ಮಹತ್ಯೆ ಎಂದು ಶಂಕಿಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.ರೇಷ್ಮಾ ಸಾವಿನ ತನಿಖೆಯ ಭಾಗವಾಗಿ ಸಂದೇಶ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಸಾವಿನ ನಂತರ ಸಂದೇಶ್ ಮಾನಸಿಕವಾಗಿ ತೀವ್ರ ನೊಂದಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.ರವಿವಾರ ಮಧ್ಯಾಹ್ನ ನಡೆದ ಈ ಘಟನೆ ಸಂಬಂಧ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!