ಬಡ ಕುಟುಂಬಕ್ಕೆ ವಿಟ್ಲ ಠಾಣಾ ಪೊಲೀಸರಿಂದ ಸಹಾಯಹಸ್ತ



ವಿಟ್ಲ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಫೆ:10 ರಂದು ವೀರಕಂಭ ಗ್ರಾಮದ ಗಣೇಶ್ ಕೋಡಿ ಎಂಬಲ್ಲಿ ನಡೆದಿತ್ತು. ಗಣೇಶ್ ಕೋಡಿ ನಿವಾಸಿ ರಾಜೇಶ್ವರಿ ಅವರ ಮನೆಯಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿದ್ದ ಬಟ್ಟೆ-ಬರೆ ಸೇರಿದಂತೆ ದಿನನಿತ್ಯ ಉಪಯೋಗದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು.
ಈ ಘಟನೆಯಿಂದ ಕಂಗಾಲಾಗಿದ್ದ ಇವರಿಗೆ, ವಿಟ್ಲ ಠಾಣೆಯ ಎಲ್ಲಾ ಸಿಬ್ಬಂದಿಗಳು ತಮ್ಮ ದುಡಿಮೆಯಲ್ಲಿ ಕೈಲಾದಷ್ಟು ದೇಣಿಗೆಯನ್ನು ಒಟ್ಟು ಸೇರಿಸಿ ಮಹಿಳೆಗೆ ಮೊತ್ತವನ್ನು ಹಸ್ತಾಂತರಿಸಿದ್ದಾರೆ. ವಿಟ್ಲ ಠಾಣಾ ಪೊಲೀಸರ ಈ ಕಾರ್ಯವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹಿಂದೆ ವಿಟ್ಲ ಠಾಣಾ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ರವರು ತಾವೇ ಸ್ವತಃ ಮಹಿಳೆಗೆ ಸಹಾಯಹಸ್ತ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇನ್ನೂ ಯಾರಾದರೂ ಈ ಕುಟುಂಬಕ್ಕೆ ನೆರವು ನೀಡಲು ಬಯಸಿದರೆ 9108587613 ನಂಬರಿಗೆ ಸಂಪರ್ಕಿಸಿ ಸಹಾಯ ಮಾಡಲು ವಿನಂತಿಸಲಾಗಿದೆ.








