Monday, July 27, 2026
spot_imgspot_img
spot_imgspot_img

ನಗರಗಳಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಿಸಲು ಉಚಿತ ಸಹಾಯಧನ; ಯಾರು ಅರ್ಜಿ ಸಲ್ಲಿಸಬಹುದು?-ಏನಿದು ರಾಜ್ಯ ಸರ್ಕಾರದ ‘ಆಹಾರ ವಾಹಿನಿ’ ಯೋಜನೆ?

- Advertisement -
- Advertisement -

ಸ್ವಂತ ಮೊಬೈಲ್ ಕ್ಯಾಟೀನ್ ಆರಂಭಿಸಲು ಆಹಾರ ವಾಹಿನಿ ಯೋಜನೆಯಡಿ 3 ಲಕ್ಷ ರೂಪಾಯಿ ಉಚಿತ ಸಹಾಯಧನ ಸಿಗುತ್ತದೆ.

ಬೀದಿ ಬದಿ ವ್ಯಾಪಾರ ನಡೆಸುವವರಿಗೆ ಮತ್ತು ಆಹಾರ ಉದ್ಯಮಗಳಿಗೆ ಇತ್ತೀಚೆಗೆ ಹೆಚ್ಚಿನ ಬೇಡಿಕೆ ಇದೆ. ಇದನ್ನು ಗಮನಿಸಿ ರಾಜ್ಯ ಸರ್ಕಾರವು ‘ಆಹಾರ ವಾಹಿನಿ’ ಯೋಜನೆಯಡಿ ಆರ್ಥಿಕ ನೆರವು ಘೋಷಿಸಿದೆ.

ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಮೂಲಕ ಜಾರಿಗೊಳಿಸಲಾಗಿರುವ ಈ ಯೋಜನೆಯಡಿ ಫಲಾನುಭವಿಗಳಿಗೆ ಸಂಚಾರಿ EV-ಗೂಡ್ಸ್ ವಾಹನಗಳನ್ನು ಖರೀದಿಸಲು 3 ಲಕ್ಷ ರೂಪಾಯಿಗಳ ಸಹಾಯ ಧನ ನೀಡಲಾಗುತ್ತಿದೆ.

ಏನಿದು ಆಹಾರ ವಾಹಿನಿ ಯೋಜನೆ?
ನಗರ ಪ್ರದೇಶಗಳಲ್ಲಿ ಜನಸಂದಣಿ ಇರುವೆಡೆ ತಿನಿಸುಗಳನ್ನು ಮಾರಲು ಅನುಕೂಲವಾಗುವಂತೆ ನಾಲ್ಕು ಚಕ್ರಗಳ ಗೂಡ್ಸ್ ವಾಹನಗಳನ್ನು ‘ಮೊಬೈಲ್ ಕ್ಯಾಂಟೀನ್’ ಅಥವಾ ಆಹಾರದ ಕಿಯೋಸ್ಕ್ ಮಾದರಿಯಲ್ಲಿ ವಿನ್ಯಾಸಗೊಳಿಸಿ ನೀಡಲಾಗುತ್ತದೆ.

ಸರ್ಕಾರದ ಪಾಲು- 3 ಲಕ್ಷ ಸಹಾಯ ಧನ

ಉಳಿದ ಮೊತ್ತ: ಬಾಕಿ ಹಣವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದು.

ಯಾರು ಅರ್ಜಿ ಸಲ್ಲಿಸಬಹುದು?

ಪ್ರತಿ ಸಮುದಾಯಕ್ಕೂ ಪ್ರತ್ಯೇಕ ಅಭಿವೃದ್ಧಿ ನಿಗಮವಿದ್ದು, ಆಯಾ ನಿಗಮಗಳ ಮೂಲಕವೇ ಅರ್ಜಿ ಕರೆಯಲಾಗಿದೆ. ಅರ್ಹ ಸಮುದಾಯಗಳ ಪಟ್ಟಿ ಹೀಗಿದೆ:
ವಿಶ್ವಕರ್ಮ ಸಮುದಾಯ ನಿಗಮ (ಪ್ರವರ್ಗ- 2ಎ)
ಮಡಿವಾಳ ಸಮುದಾಯ ನಿಗಮ: ಮಡಿವಾಳ, ಅಗಸ, ಚಕಲ, ಧೋಬಿ, ಮನ್ನನ್, ಪರಿತ್, ರಾಜಕ, ಸಕಲ, ವಣ್ಣನ್, ವೆಳ್ಳತೇಡನ್ ಮತ್ತು ಸಾಕ್ರಲವಾಡು (ಪ್ರವರ್ಗ-2ಎ)
ಕಾಡುಗೊಲ್ಲ ಸಮುದಾಯ ನಿಗಮ: (ಪ್ರವರ್ಗ-1)
ಸವಿತಾ ಸಮಾಜ ನಿಗಮ: ಸವಿತಾ ಮತ್ತು ಅದರ ಉಪಜಾತಿಗಳು (ಪ್ರವರ್ಗ-2ಎ)
ವೀರಶೈವ-ಲಿಂಗಾಯತ ನಿಗಮ: (ಪ್ರವರ್ಗ-3ಬಿ)
ಅಲೆಮಾರಿ/ಅರೆ ಅಲೆಮಾರಿ ನಿಗಮ: ಬುಡ್ಗ ಜಂಗಮ, ಬೈಲಪತ್ತರ್, ಬೈರಾಗಿ, ಗೋಸಾವಿ, ಹಾವಾಡಿಗ, ಸುಡುಗಾಡು ಸಿದ್ಧ, ಪಿಚ್ಚ ಕುಂಟಲ, ಸಿಕ್ಕಲಿಗಾರ ಸೇರಿದಂತೆ 46 ಜಾತಿಗಳು (ಪ್ರವರ್ಗ-1)
ಮರಾಠ ಸಮುದಾಯ ನಿಗಮ: ಮರಾಠ, ಮರಾಠಾ, ಅರೆ ಮರಾಠ, ಆರ್ಯ, ಕೊಂಕಣ ಮರಾಠ, ಕ್ಷತ್ರಿಯ ಮರಾಠ ಇತ್ಯಾದಿ (ಪ್ರವರ್ಗ-3ಬಿ)

ಇತರೆ ಹಿಂದುಳಿದ ವರ್ಗಗಳ ನಿಗಮ: ಮೇಲೆ ತಿಳಿಸಿದ ನಿಗಮಗಳನ್ನು ಹೊರತುಪಡಿಸಿ ಉಳಿದ ಹಿಂದುಳಿದ ವರ್ಗದವರು ಡಿ ದೇವರಾಜು ಅರಸು ನಿಗಮದಡಿ (ಪ್ರವರ್ಗ-1, 2ಎ, 3ಎ, 3ಬಿ) ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಗಳು ಯಾವುವು?

ಡಿ ದೇವರಾಜು ಅರಸು ನಿಗಮ: 2026 ಮಾರ್ಚ್ 04
ಮರಾಠ ನಿಗಮ: 2026 ಮಾರ್ಚ್ 05
ಮಡಿವಾಳ/ಅಲೆಮಾರಿ/ಕಾಡುಗೊಲ್ಲ ನಿಗಮಗಳು: 2026 ಮಾರ್ಚ್ 06
ವಿಶ್ವಕರ್ಮ/ಸವಿತಾ ಸಮಾಜ ನಿಗಮಗಳು: 2026 ಮಾರ್ಚ್ 07
ವೀರಶೈವ ಲಿಂಗಾಯತ ನಿಗಮ: 2026 ಮಾರ್ಚ್ 08

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

ವಯೋಮಿತಿ- ಅರ್ಜಿದಾರರ ವಯಸ್ಸು 21ರಿಂದ 45 ವರ್ಷಗಳ ಒಳಗಿರಬೇಕು.

ಆದಾಯ ಮಿತಿ: ಕುಟುಂಬದ ವಾರ್ಷಿಕ ವರಮಾನ 3 ಲಕ್ಷ ರೂಪಾಯಿಗಳನ್ನು ಮೀರಿರಬಾರದು.

ಒಮ್ಮೆ ಮಾತ್ರ ಅವಕಾಶ: ಈಗಾಗಲೇ ನಿಗಮದ ಯಾವದುಏ ಯೋಜನೆಯಲ್ಲಿ ನೀವು ಅಥವಾ ನಿಮ್ಮ ಕುಟುಂಬದವರು ಲಾಭ ಪಡೆದಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತಿಲ್ಲ.

ದಾಖಲೆಗಳು: ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್ಬುಕ್ (ಎಲ್ಲ ಹೆಸರು ಒಂದೇ ಇರಬೇಕು)

ಯಾವ ನಗರ ಪ್ರದೇಶಗಳಿಗೆ ಅವಕಾಶ?

ಬೆಂಗಳೂರು ಮಹಾನಗರ ವ್ಯಾಪ್ತಿ: ಬ್ಯಾಟರಾಯನಪುರ, ಮಹಾಲಕ್ಷ್ಮೀಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಗಾಂಧಿನಗರ, ಕೆಆರ್ ಪುರಂ, ಮಹದೇವಪುರ, ಪುಲಕೇಶಿನಗರ, ಸರ್ವಜ್ಞ ನಗರ, ಸಿವಿ ರಾಮನ್ ನಗರ, ಶಿವಾಜಿನಗರ, ದಾಸರಹಳ್ಳಿ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ, ಗೋವಿಂದರಾಜನಗರ, ವಿಜಯನಗರ, ಚಾಮರಾಜಪೇಟೆ, ಚಿಕ್ಕಪೇಟೆ, ರಾಜರಾಜೇಶ್ವರಿ ನಗರ, ಶಾಂತಿ ನಗರ, ರಾಜಾಜಿನಗರ, ಆನೇಕಲ್ ಇತ್ಯಾದಿ.

ಇತರೆ ಮಹಾನಗರ ಪಾಲಿಕೆಗಳು, ಶಿವಮೊಗ್ಗ ನಗರ, ತುಮಕೂರು ನಗರ, ಮೈಸೂರು (ಕೃಷ್ಣರಾಜ, ಚಾಮರಾಜ, ನರಸಿಂಹರಾಜ), ಮಂಗಳೂರು ನಗರ (ದಕ್ಷಿಣ), ಬೆಳಗಾವಿ ಉತ್ತರ, ಹುಬ್ಬಳ್ಳಿ-ಧಾರವಾಡ (ಪೂರ್ವ, ಸೆಂಟ್ರಲ್, ಪಶ್ಚಿಮ), ಕಲಬುರಗಿ ಉತ್ತರ, ಬಳ್ಳಾರಿ ನಗರ.

ವಿಶೇಷ ಸೂಚನೆ (ಮರಾಠ ನಿಗಮಕ್ಕೆ): ಮರಾಠ ಅಭಿವೃದ್ಧಿ ನಿಗಮದಡಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಮೇಲೆ ತಿಳಿಸಿದ ನಗರಗಳ ಜೊತೆಗೆ ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ಉಡುಪಿ, ಕಾರವಾರ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್ ಸೇರಿದಂತೆ ರಾಜ್ಯದ ಬಹುತೇಕ ತಾಲೂಕು ಕೇಂದ್ರದಲ್ಲಿ ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಸೇವಾ ಸಿಂಧೂ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ (https://sevasindhu.karnataka.gov.in/Sevasindhu/Kannada?ReturnUrl=/ ) ಅರ್ಜಿ ಸಲ್ಲಿಸಬೇಕು. (ಗ್ರಾಮ ಒನ್, ಬೆಂಗಳೂರು ಒನ್/ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು).

- Advertisement -

Related news

error: Content is protected !!