3 ವಾಹನಗಳು ಸ್ವಾಧೀನ, 50 ಟನ್ ಮರಳು ಪತ್ತೆ



ಕಡಬ: ಫೆ.16 ರಂದು ಬೆಳಿಗ್ಗೆ ಸುಮಾರು 10.30 ಗಂಟೆಗೆ ಕಡಬ ತಾಲೂಕು ಐನೆಕಿದು ಗ್ರಾಮದ ಕಲ್ಲಾಜೆ ಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿದರು.
ಪೊಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಜಿ.ವಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಆರೋಪಿತರು ಸ್ಥಳದಿಂದ ಪರಾರಿಯಾಗಿದ್ದಾರೆ.
ದಾಳಿ ವೇಳೆ TATA HITACHI ಯಂತ್ರ, KA-21-B-3929 ಸಂಖ್ಯೆಯ ಐಚರ್ ಟಿಪ್ಪರ್ ಹಾಗೂ KA-20-D-7639 ಸಂಖ್ಯೆಯ ಮತ್ತೊಂದು ಟಿಪ್ಪರ್ ಲಾರಿಯನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಸುಮಾರು 50 ಟನ್ ಮರಳು (ಅಂದಾಜು ಮೌಲ್ಯ ₹50,000) ಪತ್ತೆಯಾಗಿದ್ದು, ಸ್ವಾಧೀನಪಡಿಸಿದ ವಾಹನಗಳ ಒಟ್ಟು ಅಂದಾಜು ಮೌಲ್ಯ ಸುಮಾರು ₹20 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 08/2026 ದಾಖಲಿಸಲಾಗಿದ್ದು, BNS-2023ರ ಕಲಂ 303(2), MMRD ಕಾಯ್ದೆಯ 4(1), 21(1) ಹಾಗೂ KMMCR-1994ರ 43 ಮತ್ತು 44 ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.








