Tuesday, July 21, 2026
spot_imgspot_img
spot_imgspot_img

ಮಾಣಿ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಣಿಕ್ಯ ಸಂಜೀವಿನಿ ಒಕ್ಕೂಟ, ಹಾಗೂ ಕರ್ನಾಟಕ ಪ್ರೌಢಶಾಲೆ ಮಾಣಿ ಇವುಗಳ ಜಂಟಿ ಸಹಯೋಗದಲ್ಲಿ-ಸ್ವಚ್ಛತಾ ಕಾರ್ಯಾಚರಣೆ

- Advertisement -
- Advertisement -

ಮಾಣಿ: ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಣಿಕ್ಯ ಸಂಜೀವಿನಿ ಒಕ್ಕೂಟ, ಹಾಗೂ ಕರ್ನಾಟಕ ಪ್ರೌಢಶಾಲೆ ಮಾಣಿ ಇವುಗಳ ಜಂಟಿ ಸಹಯೋಗದಲ್ಲಿ 4ನೇ ಹಂತದ ಅನುಸರಣಿಯ ಸಮುದಾಯದತ್ತ ಸಾಂತ್ವನ ಅಭಿಯಾನ ಕಸ ಮುಕ್ತ, ನಶೆ ಮುಕ್ತ, ಹಿಂಸಾಮುಕ್ತ ಮಾದರಿ ಗ್ರಾಮ ಸ್ವಚ್ಛ ಮನೆ ಸ್ವಯಂ ಘೋಷಣೆ- ಸ್ವಚ್ಛತಾ ಕಾರ್ಯಚರಣೆಯು ಫೆ. 19ರಂದು ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲಿ ನಡೆಯಿತು.

ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ, ಮನೆ ಹಾಗೂ ಶಾಲೆಗಳಲ್ಲಿ ಕಸ ನಿರ್ವಹಣೆ, ಅಪಾಯಕಾರಿ ಪ್ಯಾಡ್, ಪ್ಯಾಂಪರ್ಸ್ ಬದಲು ಪರಿಸರ ಸ್ನೇಹಿ ಪ್ಯಾಡ್ ಪ್ಯಾಂಪಾರ್ಸ್ ಬಳಕೆ ಬಗ್ಗೆ ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕರು ನರೇಗಾ ಮಾಜಿ ಓಂಬುಡ್ಸ್ ಮೆನ್, ಸ್ವಚ್ಛತಾ ರಾಯಭಾರಿ ಶ್ರೀಯುತ ಶೀನ ಶೆಟ್ಟಿರವರು ಅರಿವು ಮೂಡಿಸಿ ಮುಂದಿನ 30 ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ಮನೆಯನ್ನು ಸ್ವಚ್ಛ ಮನೆಯನ್ನಾಗಿಸಿ ಸ್ವಚ್ಛ ಮನೆ ಸ್ವಯಂ ಘೋಷಣೆ ಪತ್ರ ನೀಡಿ ತಮ್ಮ ಶಾಲೆಯನ್ನು ಮಾದರಿಯನ್ನಾಗಿಸುವ ಮೂಲಕ ಸ್ವಚ್ಛ ಗ್ರಾಮ ಮಾದರಿ ಗ್ರಾಮ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಸ್ವಚ್ಛತೆ ಬಗ್ಗೆ ತಿಳುವಳಿಕೆ ಮೂಡಿಸಿ ಸ್ವಚ್ಛ ಮನೆಯನ್ನಾಗಿಸಿ ಸ್ವಯಂ ಘೋಷಣಾ ಪತ್ರ ನೀಡುವುದಾಗಿ ಸಂಕಲ್ಪ ಮಾಡಿದರು. ಜನ ಶಿಕ್ಷಣ ಟ್ರಸ್ಟಿನ ಸಹನಿರ್ದೇಶಕರಾದ ಶ್ರೀಯುತ ಕೃಷ್ಣ ಮೂಲ್ಯರವರು ಪ್ರಾಸ್ತಾವಿಕ ಮಾತನಾಡಿ ವಿದ್ಯಾರ್ಥಿಗಳು ಸ್ವಚ್ಛತೆಯನ್ನು ಅಭ್ಯಾಸದಿಂದ ಮಾತ್ರ ಅಳವಡಿಸಿಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ದೆಹಲಿಯ ಪರಿಸ್ಥಿತಿ ನಿರ್ಮಾಣವಾಗಲು ನಾವೇ ಕಾರಣರಾಗಬೇಕಾದೀತು ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.

ಪಂಚಾಯತ್ ನ ಮಾಜಿ ಸದಸ್ಯರೂ ಕರ್ನಾಟಕ ಪ್ರೌಢಶಾಲೆಯ ಆಡಳಿತ ಮಂಡಳಿಯ ಸದಸ್ಯರೂ ಆದ ಬಾಲಕೃಷ್ಣ ಆಳ್ವಾರವರು ಮಾತನಾಡಿ ಇಂದಿನ ಸ್ವಚ್ಛತಾ ಅರಿವಿನ ಕಾರ್ಯಕ್ರಮ ಭವಿಷ್ಯದ ಪಾಠವಾಗಬೇಕಾದರೆ ವಿದ್ಯಾರ್ಥಿಗಳು ಸ್ವಚ್ಛತಾ ಯೋಧರಂತೆ ಸ್ವಚ್ಛತಾ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಚ್ಛತಾ ಅಭಿಯಾನದಲ್ಲಿ ಕೈ ಜೋಡಿಸಬೇಕೆಂದು ತಿಳಿಸಿದರು. ಇಂದಿನ ಕಾರ್ಯಕ್ರಮದಲ್ಲಿ
ಮಾಣಿ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಶ್ರೀಯುತ ಸುದೀಪ್ ಕುಮಾರ್ ಶೆಟ್ಟಿ, ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಶಾಲಾ ಸಂಚಾಲಕರಾದ ಇಬ್ರಾಹಿಂ, ಪಂಚಾಯತ್ ಮಾಜಿ ಸದಸ್ಯರು ಹಾಗೂ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಮೇಲ್ವಿನ್ ಕಿಶೋರ್ ಮಾರ್ಟೀಸ್, ಬಂಟ್ವಾಳ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಶ್ರೀಮತಿ ವಿದ್ಯಾ, ಸಮಾಜ ಕಾರ್ಯಕರ್ತೆ ಕುಮಾರಿ ದಾಕ್ಷಾಯಿಣಿ, ಮಾಣಿಕ್ಯ ಸಂಜೀವಿನಿ ಒಕ್ಕೂಟದ ಎಂಬಿಕೆ ಸ್ವಾತಿ, ಎಲ್.ಸಿ.ಆರ್.ಪಿ ಲೈಲಾಬಿ, ಪಶುಸಖಿ ಚೈತ್ರಾ ಕುಮಾರಿ, ಕೃಷಿ ಸಖಿ ಕವಿತಾ, ಶಾಲಾ ಶಿಕ್ಷಕ ವೃಂದದವರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಚನ್ನಪ್ಪ ಗೌಡರವರು ಸ್ವಾಗತಿಸಿದರು. ಶಾಲಾ ಸಹಶಿಕ್ಷಕರಾದ ಜಯರಾಮ್ ರವರು ನಿರೂಪಿಸಿದರು. ಮಾಣಿಕ್ಯ ಸಂಜೀವಿನಿ ಒಕ್ಕೂಟದ ಶ್ರೀಮತಿ ಲೈಲಾಬಿರವರು ವಂದಿಸಿದರು.

- Advertisement -

Related news

error: Content is protected !!