Saturday, September 5, 2026
spot_imgspot_img
spot_imgspot_img

ಹೈದರಾಬಾದ್‌ನಲ್ಲಿ ಕುಳಿತು ಸೈಬರ್ ವಂಚನಾ ಜಾಲ ನಡೆಸುತ್ತಿದ್ದ 6 ಮಂದಿಯ ಬಂಧನ-ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆ ಕಾರ್ಯಾಚರಣೆ – 2 ಕೋಟಿ ರೂ. ವಹಿವಾಟು ಬಯಲು

- Advertisement -
- Advertisement -

ಮಂಗಳೂರು: ಹೈದರಾಬಾದ್‌ನಲ್ಲಿ ನೆಲೆಸಿಕೊಂಡು ದೇಶದ ವಿವಿಧ ಭಾಗಗಳಲ್ಲಿ ಸೈಬರ್ ವಂಚನೆ ನಡೆಸುತ್ತಿದ್ದ ಜಾಲವನ್ನು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಭೇದಿಸಿದ್ದು, ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ.

ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆ ಅ.ಕ್ರ. 09/2026 ರಂತೆ ಕಲಂ 66(ಸಿ), 66(ಡಿ) ಐಟಿ ಕಾಯ್ದೆ ಹಾಗೂ ಕಲಂ 308(5), 318(4), 319(2), 111 ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ-2023ರಡಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ

ಮಂಗಳೂರು ನಗರದ ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ಅವರ ಸ್ನೇಹಿತ ಇಬ್ರಾಹಿಂ ಎಂಬಾತನು ವ್ಯವಹಾರದ ಉದ್ದೇಶಕ್ಕಾಗಿ ಕರೆಂಟ್ ಖಾತೆ ನೀಡುವಂತೆ ಕೇಳಿಕೊಂಡಿದ್ದನು. ವಿಶ್ವಾಸದ ಮೇರೆಗೆ ದೂರುದಾರರು ತಮ್ಮ ಬ್ಯಾಂಕ್ ಖಾತೆಯ ಪಾಸ್ ಬುಕ್, ಎಟಿಎಂ ಕಾರ್ಡ್, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್‌ಟೆಲ್ ಸಿಮ್ ಕಾರ್ಡ್ ನೀಡಿದ್ದರು. ಆದರೆ ಬಳಿಕ ಆ ಖಾತೆಯನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೈದರಾಬಾದ್‌ನಲ್ಲಿ ಕಾರ್ಯಾಚರಣೆ ತನಿಖೆ ವೇಳೆ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ, ಬ್ಯಾಂಕ್ ಖಾತೆ ದುರುಪಯೋಗಪಡಿಸಿಕೊಂಡ ಸೈಬರ್ ವಂಚನಾ ತಂಡ ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಯಿತು. ಪೊಲೀಸರ ವಿಶೇಷ ತಂಡ ಹೈದರಾಬಾದ್‌ಗೆ ತೆರಳಿ 5 ಮಂದಿಯನ್ನು ಅಲ್ಲಿ ಹಾಗೂ ಒಬ್ಬ ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ. ಬಂಧಿತ ಆರೋಪಿಗಳನ್ನು ಶೇಖ್ ಕರೀಮುಲ್ಲಾ @ ರಸೂಲ್ (27), ನೆಲ್ಲೂರು, ಆಂಧ್ರ ಪ್ರದೇಶಬುಡಿದಿನ್ನೆ ವಂಶಿ @ ಗುರು (21), ಕರ್ನೂಲ್, ಆಂಧ್ರ ಪ್ರದೇಶಪಂಡಿತಿ ಕ್ರಾಂತಿ ಕುಮಾರ್ (36), ಹೈದರಾಬಾದ್, ತೆಲಂಗಾಣ ಇಬ್ರಾಹಿಂ (35), ಮುಲ್ಕಿ, ಮಂಗಳೂರು ಬಡೆ ಶ್ರೀನಿವಾಸ್ (38), ಹೈದರಾಬಾದ್, ತೆಲಂಗಾಣ ಉತ್ಪಲ ಸಂತೋಷ್ ಕೃಷ್ಣ (35), ನೆಲ್ಲೂರು, ಆಂಧ್ರ ಪ್ರದೇಶ ಸ್ವಾಧೀನಪಡಿಸಿದ ಸೊತ್ತುಗಳು ಪೊಲೀಸರು ಆರೋಪಿತರಿಂದ ಮೊಬೈಲ್ ಫೋನ್ – 18 ಲ್ಯಾಪ್‌ಟಾಪ್ – 1 ಸಿಮ್ ಕಾರ್ಡ್ – 12 ಚೆಕ್ ಬುಕ್ – 15 ಬ್ಯಾಂಕ್ ಪಾಸ್ ಬುಕ್ – 12 ಡೆಬಿಟ್ ಕಾರ್ಡ್ – 18 ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಂಚನೆಯ ವಿಧಾನ ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬ್ಯಾಂಕ್ ಖಾತೆದಾರರಿಗೆ ಶೇಕಡಾ 4 ರಿಂದ 6 ರಷ್ಟು ಕಮಿಷನ್ ನೀಡುವುದಾಗಿ ಆಕರ್ಷಕ ಜಾಹೀರಾತು ನೀಡಿ ಖಾತೆ ವಿವರಗಳನ್ನು ಪಡೆಯುತ್ತಿದ್ದರು. ನಂತರ ಸಂಪೂರ್ಣ ಬ್ಯಾಂಕ್ ಮಾಹಿತಿ ಹಾಗೂ OTPಗಳನ್ನು ಪಡೆದು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸುತ್ತಿದ್ದರು.

NCRP ಪೋರ್ಟಲ್‌ನಲ್ಲಿ ದಾಖಲೆ

ಈ ಪ್ರಕರಣದ ಒಂದು ಬ್ಯಾಂಕ್ ಖಾತೆಯ ವಿರುದ್ಧವೇ ದೇಶದಾದ್ಯಂತ NCRP ಪೋರ್ಟಲ್‌ನಲ್ಲಿ 5 ದೂರುಗಳು ದಾಖಲಾಗಿವೆ. ಪರಿಶೀಲನೆ ವೇಳೆ ಒಟ್ಟು 72 ಬ್ಯಾಂಕ್ ಖಾತೆಗಳ ವಿವರ ಪತ್ತೆಯಾಗಿದ್ದು, ಅದರಲ್ಲಿ 30 ಖಾತೆಗಳ ವಿರುದ್ಧ 272ಕ್ಕೂ ಹೆಚ್ಚು ದೂರುಗಳು ದಾಖಲಾಗಿರುವುದು ಕಂಡುಬಂದಿದೆ. ಇದೇ ಜಾಲವು ಫೆ. 26ರಂದು ಒಂದೇ ದಿನ 2 ಕೋಟಿಗೂ ಅಧಿಕ ಹಣಕಾಸು ವಹಿವಾಟು ನಡೆಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಇನ್ನಷ್ಟು ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!