Tuesday, July 21, 2026
spot_imgspot_img
spot_imgspot_img

ಕೆಲಿಂಜ: ಶ್ರೀ ಕೆಲಿಂಜೇಶ್ವರಿ ಭಜನಾ ಮಂಡಳಿಯ 50ನೇ ವಾರ್ಷಿಕ ಮಹೋತ್ಸವ

- Advertisement -
- Advertisement -

zeekannada ಸ.ರಿ.ಗ.ಮ.ಪ ಖ್ಯಾತಿಯ (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ) ಶ್ರೀ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮ

ಕೆಲಿಂಜದ ಶ್ರೀ ಕೆಲಿಂಜೇಶ್ವರಿ ಭಜನಾ ಮಂಡಳಿ ವತಿಯಿಂದ 50ನೇ ವಾರ್ಷಿಕೋತ್ಸವವು ಮಾರ್ಚ್ 14 ಶನಿವಾರದಂದು ನಡೆಯಲಿದೆ. ಇದರ ಅಂಗವಾಗಿ ಫೆಬ್ರವರಿ 22 ರವಿವಾರದಿಂದ ಮಾರ್ಚ್ 8 ರವಿವಾರದವರೆಗೆ ಪ್ರತಿ ರವಿವಾರ ಹಗಲು ನಗರ ಭಜನೆ ಕಾರ್ಯಕ್ರಮಗಳು ನಡೆಯಲಿವೆ.

ಮಾರ್ಚ್ 14ರಂದು ಬೆಳಿಗ್ಗೆ 6.30ರಿಂದ ರಾತ್ರಿ 9.30ರವರೆಗೆ ಭಜನೋತ್ಸವ ಜರುಗಲಿದ್ದು, ದೀಪ ಪ್ರಜ್ವಲನೆ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕೆಲಿಂಜದ ವೇದಮೂರ್ತಿ ಶ್ರೀ ಮಹೇಶ್ ಭಟ್ ತಂತ್ರಿಗಳು ನೆರವೇರಿಸಲಿದ್ದಾರೆ. ರಾತ್ರಿ 9.30ಕ್ಕೆ ಭಜನಾ ಮಹಾಮಂಗಳಾರತಿ ನಡೆಯಲಿದೆ.

ರಾತ್ರಿ 10 ಗಂಟೆಗೆ Zee Kannada ವಾಹಿನಿಯ ಸ.ರಿ.ಗ.ಮ.ಪ ಖ್ಯಾತಿಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮ ನಡೆಯಲಿದೆ.

ಇದೇ ದಿನ ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕರ್ ನಾರಾಯಣ ಭಟ್ ಪುಂಡಿಕಾಯಿ, ಅನುವಂಶಿಕ ಆಡಳಿತ ಮೊಕ್ತೆಸರರು, ಶ್ರೀ ಕ್ಷೇತ್ರ ಕೆಲಿಂಜ ವಹಿಸಲಿದ್ದಾರೆ. ಆಶೀರ್ವಚನವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳು ಮತ್ತು ಶ್ರೀ ಶ್ರೀ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ ಶ್ರೀ ಮಹಾಲಕ್ಷೀ ಕ್ಷೇತ್ರ ಶ್ರೀ ಧಾಮ ಮಾಣಿಲ ನೀಡಲಿದ್ದಾರೆ. ಗಣ್ಯ ಅತಿಥಿಗಳಾಗಿ ಗಿರಿಧರ್ ರೈ ಬೆಂಞಂತ್ತಿಮಾರ್ ಗುತ್ತು (ಗೌರವಾಧ್ಯಕ್ಷರು, ಕೆಲಿಂಜೇಶ್ವರಿ ಭಜನಾ ಮಂಡಳಿ), ಸತೀಶ್ ಆಳ್ವ (ಶ್ರೀ ಸಾಯಿಗಣೇಶ್ ಇಂಡಿಯನ್ ಗ್ಯಾಸ್ ) ಶ್ರೀ ರಾಜೇಂದ್ರ ಹೊಳ್ಳ( ಶ್ರೀ ಲಕ್ಷಿ ಗಣೇಶ್ ಕೆ.ಟಿ ಹೋಟೆಲ್ ಕಲ್ಲಡ್ಕ), ಆನಂದ ಸಪಲ್ಯ ಹೆಗಡೆಕೋಡಿ (ಅಧ್ಯಕ್ಷರು, ಕೆಲಿಂಜೇಶ್ವರಿ ಭಜನಾ ಮಂಡಳಿ), ಡಾ. ವಿ.ಕೆ ಹೆಗ್ಡೆ (ಪುಷ್ಪ ಕ್ಲಿನಿಕ್, ವಿಟ್ಲ), ಶ್ರೀ ಸದಾಶಿವ ಆಚಾರ್ಯ (ಶ್ರವಣ್ ಜುವೆಲ್ಲರ್ಸ್, ವಿಟ್ಲ), ಪುಷ್ಪರಾಜ್ ಶೆಟ್ಟಿಗಾರ್ (ಉದ್ಯಮಿ, ಕಲ್ಲಡ್ಕ), ಜಯಾನಂದ ಆಚಾರ್ಯ (ಉದ್ಯಮಿ, ಕಲ್ಲಡ್ಕ) ಉಪಸ್ಥಿತರಿರುವರು.

ಸನ್ಮಾನ ಕಾರ್ಯಕ್ರಮ ದಿ| ಕೃಷ್ಣ ಭಟ್ ಪುಂಡಿಕಾಯಿ ಇವರ ಪರವಾಗಿ ಸ್ಥಾಪಕ ಸಮಿತಿ ಶ್ರೀ ಕೆಲಿಂಜೇಶ್ವರಿ ಭಜನಾ ಮಂಡಳಿ ಕೆಲಿಂಜ,
ಕೃಷ್ಣಮೂರ್ತಿ ಗಾರ್ಡ್ ಕುಂಬಳೆ, ರವಿದಾಸ ಆಳ್ವ ನಡುವಳಚ್ಚಿಲ್ , ಶೀನಪ್ಪ ನಾಯ್ಕ ಮಂಗಳಪದವು, ದಿ|ಶಂಕರ ಮಡಿವಾಳ ಕಿನಿಲ ಇವರ ಪರವಾಗಿ, ಸುಂದರ ಬೆಳ್ಚಡ ನೆಕ್ಕಿಲಾರು, ಡೊಂಬಯ್ಯ ಗೌಡ ಮಾಮೇಶ್ವರ, ಚಂದಪ್ಪ ಗೌಡ ನೆಕ್ಕಿಲಾರು, ಸಂಕಪ್ಪ ಗೌಡ ಕೈಂತಿಲ, ದಿ| ಕೃಷ್ಣಪ್ಪ ಪೂಜಾರಿ ಮಚ್ಚ ಇವರ ಪರವಾಗಿ, ಶಿವಣ್ಣಗೌಡ ಕೋಚೋಡಿ, ಗೋವಿಂದ ನಾಯ್ಕ ಕಿನಿಲ, ದಿ|ಚಂದು ನಾಯ್ಕ ಮಂಗಳಪದವು ಇವರ ಪರವಾಗಿ, ಬಾಲಪ್ಪ ನಾಯ್ಕ ಮಂಗಳಪದವು ಇವರ ಪರವಾಗಿ, ನಡೆಯಲಿದೆ

- Advertisement -

Related news

error: Content is protected !!