
ಪುತ್ತೂರು: ಇನ್ವೆಂಟಿವ್ ಚೆಸ್ ಅಕಾಡೆಮಿ ವತಿಯಿಂದ ಬೆಂಗಳೂರಿನ ಈರೋ ಇಂಟರ್ ನ್ಯಾಶನಲ್ ಸ್ಕೂಲ್ ಸಭಾಂಗಣದಲ್ಲಿ ಫೆ.28ರಂದು ನಡೆದ ರಾಷ್ಟ್ರಮಟ್ಟದ ಆಲ್ ಇಂಡಿಯಾ ಫಿಡೆ ರೇಟೆಡ್ ಚೆಸ್ ಪಂದ್ಯಾಟದಲ್ಲಿ ಪ್ರಾನ್ನಿ ಜೆ.ಬಿ. ಆರನೇ ಸ್ಥಾನ ಪಡೆದಿದ್ದಾರೆ.

ಕೋಡಿಂಬಾಡಿ ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮತ್ತು ವಿನುತಾ ಜಯಪ್ರಕಾಶ್ ಅವರ ಪುತ್ರಿಯಾಗಿರುವ ಪ್ರಾನ್ವಿ ಅವರು ಪುತ್ತೂರು ಅಂಬಿಕಾ ವಿದ್ಯಾಲಯದ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಕರ್ನಾಟಕ ಚೆಸ್ ಫೆಡರೇಶನ್ ಮತ್ತು ಆಲ್ ಇಂಡಿಯಾ ಚೆಸ್ ಫೆಡರೇಶನ್ ಸದಸ್ಯರಾಗಿದ್ದಾರೆ.


ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಚೆಸ್ ಟೂರ್ನ್ ಮೆಂಟ್, ಅಳಿಕೆಯಲ್ಲಿ ನಡೆದ ಅನ್ವಿತಾ ಹೆಗ್ಡೆ ಮೆಮೋರಿಯಲ್ ಚಿಲ್ಡ್ರನ್ಸ್ ಟೂರ್ನ್ ಮೆಂಟ್, ನೆಲ್ಯಾಡಿಯ ಜ್ಞಾನೋದಯ ಬೆಥನಿ ಸಂಸ್ಥೆಯಲ್ಲಿ ನಡೆದ ಚೆಸ್ ಟೂರ್ನ್ ಮೆಂಟ್ ನಲ್ಲಿ ಉತ್ತಮ ಆಟವಾಡಿ ಗಮನ ಸೆಳೆದಿದ್ದರು.

ಪ್ರಾನ್ವಿ ಅವರ ಸಹೋದರ, ಅಂಬಿಕಾ ವಿದ್ಯಾಲಯದ 6ನೇ ತರಗತಿಯ ವಿದ್ಯಾರ್ಥಿಯಾಗಿರುವ ಪುಥಿನ್ ಜೆ.ಬಿ. ಅವರು ಕೂಡ ಚೆಸ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ.









