Tuesday, July 21, 2026
spot_imgspot_img
spot_imgspot_img

ಇಂದು ಸಿಎಂ ಸಿದ್ದರಾಮಯ್ಯ 17ನೇ ಬಜೆಟ್ ಮಂಡನೆ

- Advertisement -
- Advertisement -

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. ಸಿಎಂ ಅವರ ಇಂದಿನ ಬಜೆಟ್ ಮೇಲೆ ದೊಡ್ಡ ನಿರೀಕ್ಷೆಗಳಿದೆ.

2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಗಂಟೆ 10.15 ಕ್ಕೆ ಮಂಡಿಸಲಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನ ನಿರ್ಮಿಸಲಿದ್ದಾರೆ. ಸಿದ್ದರಾಮಯ್ಯರ ಈ ಬಜೆಟ್ ಮೇಲೆ ದುಡಿಯುವ ವರ್ಗ ಬಹಳ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟಿದೆ. ಪ್ರಮುಖವಾಗಿ ಹೋಟೆಲ್ ಉದ್ಯಮ, ಟ್ಯಾಕ್ಸಿ, ಆಟೋ ಚಾಲಕರು, ಸಾರಿಗೆ ನೌಕರರು ಬೀದಿಬದಿ ವ್ಯಾಪಾರಿಗಳು, ಕೈಗಾರಿಕಾ ವಲಯಗಳು ಸೇರಿದಂತೆ ದುಡಿಯುವ ವರ್ಗದ ಚಿತ್ತ ಇಂದಿನ ಬಜೆಟ್ ಮೇಲೆ ಇದೆ.

- Advertisement -

Related news

error: Content is protected !!