Thursday, July 23, 2026
spot_imgspot_img
spot_imgspot_img

ಯಲ್ಲಾಪುರ: ಪ್ರವಾಸಿ ತಾಣ ಜೇನುಕಲ್ಲು ಗುಡ್ಡದಲ್ಲಿ ಪ್ರಪಾತಕ್ಕೆ ಹಾರಿ ಪ್ರಾಣ ಬಿಟ್ಟ ವ್ಯಕ್ತಿ!

- Advertisement -
- Advertisement -

ಯಲ್ಲಾಪುರ: ಪ್ರಸಿದ್ಧ ಪ್ರವಾಸಿ ತಾಣವಾದ ಜೇನುಕಲ್ಲು ಗುಡ್ಡದಲ್ಲಿ ವ್ಯಕ್ತಿಯೊಬ್ಬರು ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಸಂಭವಿಸಿದೆ.ಮೃತಪಟ್ಟ ವ್ಯಕ್ತಿಯನ್ನು ಶ್ರೀನಿಧಿ ಕೃಷ್ಣ ಕಡಕೋಳ ಎಂದು ಗುರುತಿಸಲಾಗಿದೆ. ಯಲ್ಲಾಪುರದಿಂದ ಸುಮಾರು 17 ಕಿ.ಮೀ ದೂರದಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ವ್ಯೂ ಪಾಯಿಂಟ್ ಆದ ಜೇನುಕಲ್ಲು ಗುಡ್ಡದಲ್ಲಿ ಈ ದುರ್ಘಟನೆ ನಡೆದಿದೆ.

ಶ್ರೀನಿಧಿ ಮಾ.4ರಂದು ಗೋಕರ್ಣಕ್ಕೆ ಹೋಗಿ ಬರುವುದಾಗಿ ಹೇಳಿ ಸ್ಕೂಟಿಯಲ್ಲಿ ಹೊಟಿದ್ದ. ಮಾ.7ರಂದು ಈತನ ಶವ ಜೇನುಕಲ್ಲು ಗುಡ್ಡದಲ್ಲಿ ದೊರೆತಿದೆ. ಗುಡ್ಡದ ತುದಿಯಿಂದ ಆಳವಾದ ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತನ ಶರೀರವನ್ನು ಗುಡ್ಡದಿಂದ ಹೊರತೆಗೆದಿದ್ದಾರೆ. ಬಳಿಕ ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!