Tuesday, July 21, 2026
spot_imgspot_img
spot_imgspot_img

ಚಿಕ್ಕಬಳ್ಳಾಪುರ: ಹೊತ್ತಿ ಉರಿದ ಕಾರು; 70ರ ವೃದ್ಧ ಸಜೀವ ದಹನ

- Advertisement -
- Advertisement -

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನ ಆಚೇಪಲ್ಲಿ ಕ್ರಾಸ್ ಬಳಿ ಆಲ್ಟೋ ಕಾರು ಹೊತ್ತಿ ಉರಿದಿದ್ದು, ಅವಘಡದಲ್ಲಿ 70 ವರ್ಷದ ಚಾಲಕ ಸಜೀವ ದಹನವಾಗಿದ್ದಾರೆ.

ಪೆನುಮಲೆ ಗ್ರಾಮದ ಉದಯ್ ಕುಮಾರ್(70) ಮೃತ ಚಾಲಕ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಬಾಗೇಪಲ್ಲಿಯಿಂದ ಸ್ವಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕಾರಿನಲ್ಲಿ ಯಾವುದೇ ಯಾಂತ್ರಿಕ ದೋಷ ಅಥವಾ ಅಪಘಾತದ ಕುರುಹುಗಳು ಕಂಡುಬಂದಿಲ್ಲ.ಹೀಗಾಗಿ ಈ ಘಟನೆ ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಎಂಬ ಅನುಮಾನ ವ್ಯಕ್ತವಾಗಿದೆ.

ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!