Wednesday, July 22, 2026
spot_imgspot_img
spot_imgspot_img

ಚಾಮರಾಜನಗರ: ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ – ದಂಪತಿಗೆ ಗಂಭೀರ ಗಾಯ!

- Advertisement -
- Advertisement -

ಚಾಮರಾಜನಗರ: ನಗರದ ರೈಲ್ವೇ ಬಡಾವಣೆಯ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದೆ. ಅವಘಡದಲ್ಲಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡ ದಂಪತಿಯನ್ನು ಸಿ.ಪರಮೇಶ್ ಮತ್ತು ಮಂಜುಳಾ ಎಂದು ಗುರುತಿಸಲಾಗಿದೆ. ಅನಿಲ ಸೋರಿಯಾಗಿದ್ದರಿಂದ ಮನೆ ತುಂಬಾ ಬೆಂಕಿ ವ್ಯಾಪಿಸಿದೆ. ಪರಿಣಾಮ ಮನೆಯಲ್ಲಿದ್ದ ಪಾತ್ರೆ, ಪಗಡ, ಸ್ಟವ್, ದವಸಧಾನ್ಯ ಸುಟ್ಟು ಭಸ್ಮವಾಗಿದೆ.

ಗಾಯಗೊಂಡ ದಂಪತಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!