Sunday, July 19, 2026
spot_imgspot_img
spot_imgspot_img

ಎಲ್‌ಪಿಜಿ ಕೊರತೆ ಆತಂಕ: ಅಗತ್ಯ ಸರಕುಗಳ ಕಾಯ್ದೆ ಜಾರಿಗೆ ತಂದ ಕೇಂದ್ರ ಸರಕಾರ

- Advertisement -
- Advertisement -

LPG ಕೊರತೆ ಹಿನ್ನೆಲೆ | ನೈಸರ್ಗಿಕ ಅನಿಲ ಪೂರೈಕೆ ನಿಯಂತ್ರಣಕ್ಕೆ ‘ಅಗತ್ಯ ಸರಕುಗಳ ಕಾಯ್ದೆ’ ಜಾರಿಗೆ ತಂದ ಕೇಂದ್ರ ಸರಕಾರ

ಹೊಸದಿಲ್ಲಿ: ದೇಶದಲ್ಲಿ ಎಲ್‌ಪಿಜಿ ಕೊರತೆ ಬಗ್ಗೆ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 1955ರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೆ ತಂದಿದೆ. ಎಲ್‌ಪಿಜಿ ಹಾಗೂ ನೈಸರ್ಗಿಕ ಅನಿಲದ ಲಭ್ಯತೆ, ಪೂರೈಕೆ ಮತ್ತು ಸಮಾನ ವಿತರಣೆಯನ್ನು ನಿಯಂತ್ರಿಸಲು ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಹಾರ್ಮುಜ್ ಜಲಸಂಧಿ ಮೂಲಕ ಎಲ್‌ಎನ್‌ಜಿ ಸಾಗಣೆಯಲ್ಲಿ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಪೂರೈಕೆದಾರರು ‘ಫೋರ್ಸ್ ಮಜ್ಯೂರ್’ ಷರತ್ತು ಅನ್ವಯಿಸಿರುವುದರಿಂದ ನೈಸರ್ಗಿಕ ಅನಿಲವನ್ನು ಆದ್ಯತೆಯ ವಲಯಗಳಿಗೆ ಮರುಹಂಚಿಕೆ ಮಾಡುವ ಪರಿಸ್ಥಿತಿ ಉಂಟಾಗಿದೆ.ಆದೇಶದ ಪ್ರಕಾರ ಗೃಹ ಬಳಕೆಯ ಪೈಪ್ ನೈಸರ್ಗಿಕ ಅನಿಲ (PNG), ಸಿಎನ್‌ಜಿ (CNG), ಪೈಪ್‌ಲೈನ್ ಕಾರ್ಯಾಚರಣೆಗಳಿಗೆ ಅನಿಲ ಪೂರೈಕೆಗೆ ಆದ್ಯತೆ ನೀಡಲಾಗುತ್ತದೆ.

ರಸಗೊಬ್ಬರ ಕಾರ್ಖಾನೆಗಳಿಗೆ ಕಳೆದ ಆರು ತಿಂಗಳ ಸರಾಸರಿ ಬಳಕೆಯ 70 ಶೇಕಡಾ ಅನಿಲ ಪೂರೈಕೆ ಮಾಡಲಾಗುತ್ತದೆ. ಕೈಗಾರಿಕಾ ಹಾಗೂ ವಾಣಿಜ್ಯ ವಲಯಗಳಿಗೆ ಸುಮಾರು 80 ಶೇಕಡಾ ಪೂರೈಕೆ ಖಚಿತಪಡಿಸಲು ಸೂಚಿಸಲಾಗಿದೆ.ಇದೇ ವೇಳೆ ಎಲ್‌ಎನ್‌ಜಿ ಪೂರೈಕೆಯ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು ತೈಲ ಸಂಸ್ಕರಣಾ ಕಂಪನಿಗಳಿಗೆ ಅನಿಲ ಹಂಚಿಕೆಯನ್ನು ಕಳೆದ ಆರು ತಿಂಗಳ ಸರಾಸರಿ ಬಳಕೆಯ ಸುಮಾರು 65 ಶೇಕಡಕ್ಕೆ ಇಳಿಸಲು ಸರ್ಕಾರ ಸೂಚಿಸಿದೆ. ನೈಸರ್ಗಿಕ ಅನಿಲದ ಉತ್ಪಾದನೆ, ಆಮದು, ಸಂಗ್ರಹಣೆ ಮತ್ತು ಪೂರೈಕೆಗೆ ಸಂಬಂಧಿಸಿದ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸುವಂತೆ ಉತ್ಪಾದಕರು ಹಾಗೂ ವಿತರಕರಿಗೆ ಸೂಚಿಸಲಾಗಿದೆ.

- Advertisement -

Related news

error: Content is protected !!