- Advertisement -
- Advertisement -



ರಾಮನಗರ: ಯುದ್ಧದ ಎಫೆಕ್ಟ್‌ನಿಂದಾಗಿ ಒಂದೆಡೆ ಗ್ಯಾಸ್ ಸಿಲಿಂಡರ್ ಅಭಾವ ಆಗಿದ್ದು, ಮತ್ತೊಂದೆಡೆ ಸಿಲಿಂಡರ್ ಕಳ್ಳರ ಹಾವಳಿ ಹೆಚ್ಚಾಗಿದೆ. ಚನ್ನಪಟ್ಟಣದ ಕನಕನಗರದ ಕೃಷ್ಣಪ್ಪ ಎಂಬುವವರ ಮನೆಯಲ್ಲಿ ಸಿಲಿಂಡರ್ ಕಳ್ಳತನ ಮಾಡಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬಂದ ಕಳ್ಳ ಕಾಂಪೌಂಡ್ ಒಳಗೆ ಇದ್ದ ಸಿಲಿಂಡರ್ ಕದ್ದು ಎಸ್ಕೇಪ್ ಆಗಿದ್ದಾನೆ. ಫುಲ್ ಗ್ಯಾಸ್ ಇದ್ದ ಸಿಲಿಂಡರ್ ಅನ್ನು ಕಳ್ಳ ಹೊತ್ತೊಯ್ದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ಚನ್ನಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
- Advertisement -








