Sunday, May 19, 2024
spot_imgspot_img
spot_imgspot_img

ಮಂಗಳೂರು: ಹೋಟೆಲ್‌ನ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಬ್ಯಾಂಕ್‌ ಅಧಿಕಾರಿಯ ಮೃತದೇಹ ಪತ್ತೆ

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಹೋಟೆಲೊಂದರ ಸ್ವಿಮ್ಮಿಂಗ್‌ಪೂಲ್‌ನಲ್ಲಿ ವ್ಯಕ್ತಿಯೋರ್ವ ಮೃತದೇಹ ಪತ್ತೆಯಾಗಿದೆ. ಮೃತ ಪಟ್ಟಿರುವ ವ್ಯಕ್ತಿ ಬ್ಯಾಂಕ್‌ ಅಧಿಕಾರಿ ಎಂದು ತಿಳಿದು ಬಂದಿದೆ. ಈ ಘಟನೆ ನಗರದ ಪ್ರತಿಷ್ಠಿತ ಹೋಟೆಲ್‌ ಮೋತಿ ಮಹಲ್‌ನ ಸ್ಮಿಮ್ಮಿಂಗ್‌ ಪೂಲ್‌ನಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯು ಯೂನಿಯನ್‌ ಬ್ಯಾಂಕ್‌ ಅಧಿಕಾರಿ ಹುದ್ದೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್‌ ನಾಯರ್‌ ಎಂದು ಗುರುತಿಸಲಾಗಿದೆ.

ನಿನ್ನೆ ಮಂಗಳೂರಿಗೆ ಬಂದಿದ್ದ ಇವರು ಮೋತಿ ಮಹಲ್‌ ಹೋಟೆಲ್‌ನಲ್ಲಿ ಉಳಿದು ಕೊಂಡಿದ್ದು, ಇಂದು ಬೆಳಿಗ್ಗೆ 4 ಗಂಟೆಗೆ ಹೋಟೆಲ್‌ ರೂಮ್‌ನಿಂದ ಹೊರ ಹೋಗಿದ್ದು, ಈಜುಕೊಳಕ್ಕೆ ಇಳಿಯುವ ಮುನ್ನ ಮದ್ಯಪಾನ ಮಾಡಿದ್ದರೆಂದು ವರದಿಯಾಗಿದೆ. ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!