


ಕುಂಡಡ್ಕ: ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ-ಕುಳ-ವಿಟ್ಲ ಮುಡ್ನೂರು ಇದರ ನೇತೃತ್ವದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿ ಇದರ ಸಹಕಾರದೊಂದಿಗೆ ಮಾರ್ಚ್15 ಆದಿತ್ಯವಾರದಂದು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಜನೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ.
ಬೆಳಿಗ್ಗೆ ಗಂಟೆ 6.00ಕ್ಕೆ ಭಜನೋತ್ಸವ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆಯನ್ನು ರಾಧಾಕೃಷ್ಣ ಕಂಪ ಇವರು ನೆರವೇರಿಸಲಿದ್ದಾರೆ. ಗೌರವ ಉಪಸ್ಥಿತಿಯನ್ನು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರು ವೇಣುಗೋಪಾಲ ಶೆಟ್ಟಿ ಮರುವಾಳ, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ಯುವಕ ವೃಂದದ ಗೌರವಾಧ್ಯಕ್ಷರು ದಯಾನಂದ ಶೆಟ್ಟಿ ಉಜಿರೆಮಾರು ವಹಿಸಲಿದ್ದಾರೆ.
ಬೆಳಿಗ್ಗೆ ಗಂಟೆ 10:00ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭವಾಗಿ ಮಧ್ಯಾಹ್ನ 12.00ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7.00 ಗಂಟೆಗೆ ಭಜನಾ ಮಂಗಳೋತ್ಸವದ ಬಳಿಕ 7.15ಕ್ಕೆ ಮಹಾಪೂಜೆ ನಂತರ ಗಂಟೆ 7.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಬೆಳಗ್ಗೆ ಗಂಟೆ 6:00 ರಿಂದ ಸಾಯಂಕಾಲ 7:00ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನೋತ್ಸವ ನಡೆಯಲಿದೆ.








