Friday, September 4, 2026
spot_imgspot_img
spot_imgspot_img

ಸಂಚಾರ ನಿಯಮ ಉಲ್ಲಂಘನೆ: ಆರೋಪಿಗೆ ದಂಡ, 15 ದಿನ ಸಮುದಾಯ ಸೇವೆ – ಚಾಲನಾ ಪರವಾನಗಿ ಅಮಾನತು

- Advertisement -
- Advertisement -

ಸುಳ್ಯ: ಪಟ್ಟಣದಲ್ಲಿ ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ನಿವಾಸಿ ರಕ್ಷಿತ್ ಜಿ ಎಂಬುವನ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ನ್ಯಾಯಾಲಯ ದಂಡ ಹಾಗೂ ಸಮುದಾಯ ಸೇವೆ ವಿಧಿಸಿರುವ ಘಟನೆ ನಡೆದಿದೆ.ದಿನಾಂಕ 12/03/2026 ರಂದು ಸುಳ್ಯ ಪೇಟೆಯಲ್ಲಿ ಪದೇಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಆರೋಪದ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಐಎಂವಿ ಆ್ಯಕ್ಟ್‌ನ ಕಲಂ 119 R/w 177, 184 ಹಾಗೂ 194(C) ಅಡಿಯಲ್ಲಿ ಮೂರು ಪ್ರತ್ಯೇಕ ಲಘು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂತೋಷ್ ಬಿ.ಪಿ. ಅವರು ಮಾನ್ಯ ಎಸ್‌ಸಿ‌ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಸುಳ್ಯ ಅವರಿಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.ಈ ಪ್ರಕರಣಗಳು ಸಿ.ಸಿ. ನಂ. 42/26, 43/26 ಮತ್ತು 44/26 ರಂತೆ ವಿಚಾರಣೆಗೆ ಬಂದಿದ್ದು, ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಆರೋಪಿಗೆ ಎರಡು ಪ್ರಕರಣಗಳಲ್ಲಿ ಒಟ್ಟು ರೂ.3,000 ದಂಡ ವಿಧಿಸಿದೆ.

ಜೊತೆಗೆ ಮೂರು ಪ್ರಕರಣಗಳಲ್ಲಿ ತಲಾ ಐದು ದಿನಗಳಂತೆ ಒಟ್ಟು 15 ದಿನಗಳ ಕಾಲ (ದಿ.15/03/2026 ರಿಂದ 29/03/2026ರವರೆಗೆ) ಸಮುದಾಯ ಸೇವೆ ನಿರ್ವಹಿಸಲು ಆದೇಶ ನೀಡಿದೆ.ನ್ಯಾಯಾಲಯದ ಆದೇಶದಂತೆ ಆರೋಪಿಯು ಸುಳ್ಯ ಪೇಟೆಯ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮಗಳ ಕುರಿತು ಸಂದೇಶ ಇರುವ ಫಲಕಗಳನ್ನು ಹಿಡಿದು ನಿಂತು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಇದರ ಜೊತೆಗೆ ಆರೋಪಿಯ ಚಾಲನಾ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತುಗೊಳಿಸಲು ಸಹ ನ್ಯಾಯಾಲಯ ಆದೇಶ ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

Related news

error: Content is protected !!