- Advertisement -
- Advertisement -

ಅಹ್ಮದಾಬಾದ್: 46,500 ಮೆ.ಟನ್ ಅನಿಲವನ್ನು ಹೊತ್ತ ಭಾರತದ ಎರಡನೇ ಎಲ್‌ಪಿಜಿ ಟ್ಯಾಂಕರ್ ‘ನಂದಾದೇವಿ’ ಪಶ್ಚಿಮ ಏಶ್ಯಾ ಸಂಘರ್ಷದ ನಡುವೆಯೇ ಹಾರ್ಮುಝ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಮಂಗಳವಾರ ಗುಜರಾತಿನ ದೇವಭೂಮಿ ದ್ವಾರಕಾ ಜಿಲ್ಲೆಯ ವಾಡಿನಾರ್ ಬಂದರಿಗೆ ಆಗಮಿಸಿದೆ.ಭಾರತದ ಮೊದಲ ಎಲ್‌ಪಿಜಿ ಟ್ಯಾಂಕರ್ ‘ಶಿವಾಲಿಕ್ ಸೋಮವಾರ ಗುಜರಾತಿನ ಮುಂದ್ರಾ ಬಂದರನ್ನು ತಲುಪಿತ್ತು.ನಂದಾದೇವಿ ತಂದಿರುವ 46,500 ಮೆ.ಟನ್ ಎಲ್‌ಪಿಜಿಯನ್ನು ಬಿಡಬ್ಲ್ಯು ಬಿರ್ಚ್ ಹಡಗಿಗೆ ವರ್ಗಾಯಿಸಲಾಗುತ್ತಿದ್ದು ಅದು ಅನಿಲವನ್ನು ಪೂರ್ವ ಕರಾವಳಿಯ ಎನ್ನೋರ್ (ತಮಿಳುನಾಡು) ಮತ್ತು ಹಾಲ್ಡಿಯಾ (ಪ.ಬಂಗಾಳ) ಬಂದರುಗಳಿಗೆ ಸಾಗಿಸಲಿದೆ ಎಂದು ತಿಳಿಸಿದ ದೀನದಯಾಳ ಬಂದರು ಪ್ರಾಧಿಕಾರದ ಅಧ್ಯಕ್ಷ ಸುಶೀಲಕುಮಾರ್ ಸಿಂಗ್ ಅವರು, ಪ್ರತಿ ಗಂಟೆಗೆ 1,000 ಟನ್ ಅನಿಲವನ್ನು ವರ್ಗಾಯಿಸಲಾಗುತ್ತಿದೆ ಎಂದರು.





- Advertisement -







