Sunday, July 26, 2026
spot_imgspot_img
spot_imgspot_img

ಹ್ಯಾಟ್ರಿಕ್‌ ಡೈರೆಕ್ಟರ್‌ ನಿತಿನ್‌ ರೈ ಕುಕ್ಕುವಳ್ಳಿ ನಿದೇರ್ಶನದ ಕೆ.ಕೆ ಪೇಜಾವರ ಸಾಹಿತ್ಯದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಗಾಯನದ “ಜಿಡೆ ನಾಗೆ” ಹಾಡು ಬಿಡುಗಡೆ

- Advertisement -
- Advertisement -

"ಬನ" ಚಿತ್ರದ ಮೊದಲ ನಾಗನ ಹಾಡಿಗೆ ಮನಸೋತ ತುಳುನಾಡು..!

ಕೋಸ್ಟಲ್‌ವುಡ್‌ನ ಹ್ಯಾಟ್ರಿಕ್‌ ಡೈರೆಕ್ಟರ್‌ ನಿತಿನ್‌ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದ ಬನ ಚಿತ್ರದ ಮೊದಲ ಟೈಟಲ್‌ ಸಾಂಗ್‌ “ಜಿಡೆ ನಾಗೆ” ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ.

ಕೆ.ಕೆ ಪೇಜಾವರ ಅವರ ಸಾಹಿತ್ಯ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಗಾಯನದಲ್ಲಿ ಮೂಡಿಬಂದ ಈ ಹಾಡು ತುಳು ಚಿತ್ರರಂಗದ ಪೂರ್ಣ ಪ್ರಮಾಣದ ಮೊದಲ ನಾಗನ ಕುರಿತಾದ ಹಾಡಾಗಿದೆ.

ಈ ಜೋಡಿ ಈ ಹಿಂದೆ ಧರ್ಮ ದೈವ ಹಾಗು ಧರ್ಮ ಚಾವಡಿ ಚಿತ್ರದ ಎರಡು ಹಿಟ್ ಹಾಡುಗಳನ್ನು ತುಳುನಾಡಿಗೆ ನೀಡಿದ್ದ ಈ ತಂಡ ಇದೀಗ ಮತ್ತೊಂದು ವಿಭಿನ್ನತೆಯೊಂದಿಗೆ ತುಳುನಾಡಿನಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಪ್ರತಿಷ್ಠಿತ ಲಹರಿ ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿರುವ ಜಿಡೆ ನಾಗೆ ಹಾಡಿಗೆ ಜಯ ಕೀರ್ತಿ ಸಂಗೀತ ನೀಡಿದ್ದಾರೆ. ಹಾಡಿನ ಗ್ರಾಫಿಕ್ಸ್ ಕೆಲಸ ಗಮನ ಸೆಳೆದಿದೆ. ಈಷಿ ಪ್ರೊಡಕ್ಷನ್ ಅಡಿಯಲ್ಲಿ ಮನೋಹರ್ ರೈ ವೈಪಾಲ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಚಿತ್ರದಲ್ಲಿ ಮಾಧ್ಯಮ ಲೋಕದ ದಿಗ್ಗಜ ಜಯಪ್ರಕಾಶ್ ಶೆಟ್ಟಿ ಮೊದಲ ಸಲ ಬಣ್ಣ ಹಚ್ಚಿದ್ದು ವಿಶೇಷ. ಚಿತ್ರ ತುಳು ಮತ್ತು ಕನ್ನಡ ಎರಡರಲ್ಲೂ ನಿರ್ಮಾಣವಾಗುತ್ತಿದ್ದು ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

- Advertisement -

Related news

error: Content is protected !!