Wednesday, July 22, 2026
spot_imgspot_img
spot_imgspot_img

ಹಾರ್ಮುಝ್ ಜಲಸಂಧಿಯಲ್ಲಿ ಪಾಕಿಸ್ತಾನದ ಡಬಲ್ ಗೇಮ್?

- Advertisement -
- Advertisement -

ಟೆಹ್ರಾನ್, ಮಾ.27: ಹಾರ್ಮುಝ್ ಜಲಸಂಧಿಯ ಮೂಲಕ ಸಾಗಲು ಭಾರತ, ಪಾಕಿಸ್ತಾನ ಸೇರಿದಂತೆ ಐದು ರಾಷ್ಟ್ರಗಳ ಹಡಗುಗಳಿಗೆ ಅವಕಾಶ ನೀಡುವುದಾಗಿ ಇರಾನ್ ಘೋಷಿಸಿತ್ತು. ಆದರೆ ಈ ಅವಕಾಶವನ್ನು ಬಳಸಿಕೊಂಡು ಪಾಕಿಸ್ತಾನವು ಅಮೆರಿಕದ ಹಿತಾಸಕ್ತಿಗೆ ಸಂಬಂಧಿಸಿದ ಹಡಗುಗಳನ್ನು ಕರೆತಂದಿದೆ ಎಂದು ಉನ್ನತ ಗುಪ್ತಚರ ಮೂಲಗಳು ಹೇಳಿವೆ.

ಪಾಕಿಸ್ತಾನದ ಈ ಕ್ರಮವು ಸಂಘರ್ಷದ ನಿರ್ಣಾಯಕ ಹಂತದಲ್ಲಿ ಲೆಕ್ಕಾಚಾರದ `ಡಬಲ್ ಗೇಮ್’ ಎಂದು ಇರಾನ್ ಪರಿಗಣಿಸಿದ್ದು ತೀವ್ರ ಅಸಮಾಧಾನಗೊಂಡಿದೆ ಎಂದು ವರದಿಯಾಗಿದೆ .ತೈಲ ಸಾಗಿಸುವ ಸುಮಾರು 10 ಪಾಕಿಸ್ತಾನಿ ಧ್ವಜ ಹೊಂದಿದ್ದ ಹಡಗುಗಳಿಗೆ ಹಾರ್ಮುಝ್ ಜಲಸಂಧಿ ದಾಟಲು ಅವಕಾಶ ನೀಡಲಾಗಿತ್ತು. ಆದರೆ ಅನುಮತಿಸಲಾದ ಹಡಗುಗಳನ್ನು ಅಮೆರಿಕಕ್ಕೆ ಲಾಭದಾಯಕವಾದ ರೀತಿಯಲ್ಲಿ ಬಳಸಲಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಅಮೆರಿಕದ 10 ಹಡಗುಗಳಿಗೆ ಹಾರ್ಮುಮ್‌ನಲ್ಲಿ ಇರಾನ್ ಅವಕಾಶ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ನೀಡಿರುವುದು ಈ ವರದಿಗೆ ಪುಷ್ಟಿ ನೀಡಿದೆ.ಪಾಕಿಸ್ತಾನದ ಹಾರ್ಮುಝ್ ನಡವಳಿಕೆ ಉದ್ದೇಶಪೂರ್ವಕ `ಡಬಲ್ ಗೇಮ್‌’ ನ ಭಾಗವಾಗಿದೆ ಎಂದು ಇರಾನ್ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!