Tuesday, July 21, 2026
spot_imgspot_img
spot_imgspot_img

ಮಣಿಪುರ:ಮನೆ ಮೇಲೆ ಬಾಂಬ್ ದಾಳಿ; ಇಬ್ಬರು ಮಕ್ಕಳು ಮೃತ್ಯು, ಒರ್ವ ಮಹಿಳೆಗೆ ಗಾಯ

- Advertisement -
- Advertisement -

ಇಂಫಾಲ: ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆಸಿದೆ.

ಮಣಿಪುರದಲ್ಲಿ 2023ರಲ್ಲಿ ಕುಕಿ ಹಾಗೂ ಮೈಥಿ ಸಮುದಾಯದ ನಡುವೆ ಹುಟ್ಟಿಕೊಂಡ ದ್ವೇಷದ ಜ್ವಾಲೆಯು ಈಗಲೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಇದೀಗ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಇಬ್ಬರು ಚಿಕ್ಕ ಮಕ್ಕಳು ಸಾವನ್ನಪ್ಪಿದ್ದು, ಅವರ ತಾಯಿ ಗಾಯಗೊಂಡಿದ್ದಾರೆ. ಮೊಯಿರಾಂಗ್ ಟ್ರೋಂಗ್ಲಾಬಿ ಗ್ರಾಮದಲ್ಲಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಂಕಿತ ಕುಕಿ ಉಗ್ರಗಾಮಿಗಳು ಹಾರಿಸಿದ ಬಾಂಬ್ ನಾಗರಿಕರ ಮನೆಯೊಂದರ ಮೇಲೆ ಬಿದ್ದಿತ್ತು, ಆ ಸಮಯದಲ್ಲಿ ಕುಟುಂಬದ ಸದಸ್ಯರು ನಿದ್ರೆಯಲ್ಲಿದ್ದರು. ಈ ಸ್ಫೋಟದಲ್ಲಿ ಐದು ವರ್ಷದ ಬಾಲಕ ಮತ್ತು ಆರು ತಿಂಗಳ ಬಾಲಕಿ ತಮ್ಮ ಮಲಗುವ ಕೋಣೆಯೊಳಗೆ ಸಾವನ್ನಪ್ಪಿದ್ದಾರೆ. ಆ ಸಮಯದಲ್ಲಿ ಕೋಣೆಯಲ್ಲಿದ್ದ ಅವರ ತಾಯಿ ಕೂಡ ದಾಳಿಯಲ್ಲಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!