





ಮಂಗಳೂರು: ಲಯನ್ಸ್ ಜಿಲ್ಲೆ 317 ಡಿ ಯ ಸುಮಂಗಲ ಜಿಲ್ಲಾ Convention ಸಮ್ಮೇಳನ ಏಪ್ರಿಲ್ 18 ಮತ್ತು 19ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿರುವುದು.




ಈ ಸಮ್ಮೇಳನವನ್ನ ಜಿಲ್ಲೆಯ ಪ್ರಥಮ ಮಹಿಳೆ ಮಮತಾ ಶೆಣೈ ಉದ್ಘಾಟಿಸಲಿದ್ದಾರೆ. ಸಮ್ಮೇಳನ ಅಧ್ಯಕ್ಷತೆಯನ್ನು ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ನಿರ್ದೇಶಕ ಪಂಕಜ್ ಮೆಹ್ತಾ ವಂಶಿದರ್ ಬಾಬು, ದಿಕ್ಸೂಚಿ ಭಾಷಣಗಾರರಾಗಿ ವಿದ್ವಾನ್ ಸಿ ಎಸ್ ನಟೀಶ್ ಭಾಗವಹಿಸಲಿದ್ದಾರೆ ಅಲ್ಲದೆ ನಿಕಟಪೂರ್ವ ಗವರ್ನರ್ ಭಾರತಿ ಬಿ ಎಂ, ಪ್ರಥಮ ಉಪರಾಜ್ಯಪಾಲ ತಾರಾನಾಥ್ ಎಚ್ಎಂ, ದ್ವಿತೀಯ ಉಪರಾಜ್ಯಪಾಲ ಲಯನ್ ಗೋವರ್ಧನ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಆರ್ಗನೈಸಿಂಗ್ ಕಮಿಟಿಯ ಅಧ್ಯಕ್ಷರಾದ ರಾಧಾಕೃಷ್ಣ ರೈ, ಕಾರ್ಯದರ್ಶಿ ಸುಕಲತಾ ಭಂಡಾರಿ ಚೀಪ್ ಎಡ್ವೈಸರ್ ದೇವದಾಸ್ ಭಂಡಾರಿ ಕೋಶಾಧಿಕಾರಿ ಉಮಾ ಹೆಗಡೆ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ, ಹೆಚ್ಚುವರಿ ಸಂಪುಟ ಕಾರ್ಯದರ್ಶಿ ಚಂದ್ರಹಾಸ್ ರೈ , ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.ಸಂಪುಟ ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ ಉಪಸ್ಥಿತರಿದ್ದರು.








